ಹಾವೇರಿ: ಜಿಲ್ಲೆಯ ಯಾಲಕ್ಕಿನಗರದಲ್ಲಿ ಸೋಮವಾರದಿಂದ ಬುಧವಾರದವರೆಗೆ ಶಾಲಾ ವಿದ್ಯಾರ್ಥಿಗಳಿಗೆ ಆಟೋ ಸೇವೆ ಇರುವುದಿಲ್ಲ ಎಂಬ ವಿಷಯವನ್ನು ಹಾವೇರಿ ಆಟೋ ಚಾಲಕರ ಸಂಘದ ಅಧ್ಯಕ್ಷ ಅಶೋಕ್ ಮುದಗಲ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಹಾವೇರಿ ಪೊಲೀಸ್ ಇಲಾಖೆಯು, ಆಟೋದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ತುಂಬಿಕೊಂಡು ಹೋಗಲಾಗುತ್ತಿದೆ ಎಂಬ ಕಾರಣಕ್ಕೆ ಆಟೋ ಚಾಲಕರು ಮತ್ತು ಪೋಷಕರೊಂದಿದೆ ಸಭೆ ನಡೆಸಿ, ಆಟೋ ಚಾಲಕರಿಗೆ ನಿಯಮ ಪಾಲಿಸಲು ವೇಳೆ ನಿಗದಿ ಮಾಡಿತ್ತು. ಆದರೆ ಈಗ ಪೊಲೀಸರು ಆಟೋ ಚಾಲಕರಿಗೆ ಇನ್ನಿಲ್ಲದ ತೊಂದರೆ ನೀಡುತ್ತಿದ್ದಾರೆ. ಇದರಿಂದ ಮೂರು ದಿನಗಳ ಕಾಲ ಮಕ್ಕಳನ್ನು ಶಾಲೆಗೆ ಆಟೋದಲ್ಲಿ ಕರೆದುಕೊಂಡು ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.
ನಿಯಮ ಪಾಲಿಸಲು ನೀಡಿದ ವೇಳೆಯ ಮೊದಲೇ ಕಳೆದೆರಡು ದಿನಗಳಿಂದ ಪೊಲೀಸರು ಹೆದರಿಸಿ ಕಿರಕುಳ ನೀಡುತ್ತಿದ್ದಾರೆ. ಅದಕ್ಕಾಗಿ ಸೋಮವಾರದಿಂದ ಬುಧವಾರದವರೆಗೆ ಶಾಲಾ ಮಕ್ಕಳನ್ನು ಆಟೋದಲ್ಲಿ ಮಕ್ಕಳನ್ನು ಕರೆದೊಯ್ಯುವುದಿಲ್ಲ ಎಂದು ಸಂಘ ತಿಳಿಸಿದೆ. ಉಳಿದಂತೆ ಸಾರ್ವಜನಿಕರಿಗೆ ಆಟೋ ಸೇವೆ ಲಭ್ಯವಾಗಲಿದೆ ಎಂದು ಮುದಗಲ್ ತಿಳಿಸಿದರು.