ಹಾವೇರಿ ;ಜಿಲ್ಲೆಯಲ್ಲಿ ಶನಿವಾರ ಬೆಳಕಿಗೆ ಬಂದಿದ್ದ ಶಿಗ್ಗಾವಿಯ ವೃದ್ದೆಯ ಕೊಲೆ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ.
ಈ ಕುರಿತಂತೆ ಆರೋಪಿಗಳ ಬೆನ್ನತ್ತಿದ್ದ ಪೊಲೀಸರಿಗೆ ಭಾರಿ ಆಘಾತ ಎದುರಾಗಿದೆ. ಶಂಕೆ ಬಂದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾವಿ ಪೊಲೀಸರು ಕೊಲೆಯಾಗಿದ್ದ ಶಾರದಾ ಬಾಯಿ ಸಂಬಂಧಿಕರ ವಿಚಾರಣೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಶಾರದಾಬಾಯಿ ಸಂಬಂಧಿಕರಲ್ಲಿ ಒಬ್ಬರಾಗಿದ್ದ ರವೀಂದ್ರ ಮಾಳವಾದೆ ಮತ್ತು ಅವರ ಪತ್ನಿ ವಿದ್ಯಾ ಹಾಗೂ ಪುತ್ರಿ ಶೃತಿ ಮಾಳವಾದೆ ಮೇಲೆ ಶಂಕೆ ವ್ಯಕ್ತಪಡಿಸಿ ತನಿಖೆಗೆ ಮುಂದಾಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ರವೀಂದ್ರ ಮಾಳವಾದೆ ಅವರ ಪತ್ನಿ ಮತ್ತು ಪುತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮೂವರು ಹುಬ್ಬಳ್ಳಿಯ ಉಣಕಲ್ ಕೆರೆ ಬಳಿ ವಿಷ ಸೇವಿಸಿ ಅಸ್ವಸ್ಥರಾಗಿದ್ದು ಅವರನ್ನ ಕಿಮ್ಸ್ ಗೆ ದಾಖಲಿಸಲಾಗಿದೆ. ಪ್ರಕರಣ ಹೊಸ ತಿರುವು ಪಡೆದಿದ್ದು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬದ ಮೇಲೆ ತನಿಖೆ ನಡೆದು ನಂತರ ಸರಿಯಾದ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.