ಹಾವೇರಿ: ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಅತ್ಯಂತ ಮುಖ್ಯವಾಗಿದೆ. ಹೀಗಾಗಿ ಔಷಧ ಖರೀದಿ, ಪಡಿತರ ಖರೀದಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅಂಗಡಿಗಳಿಗೆ ಬರೋ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅರಿವು ಮೂಡಿಸಲು ಜಿಲ್ಲೆಯ ಹಿರೇಕೆರೂರು ತಾಲೂಕಿನ ಅಧಿಕಾರಿಗಳು ಹೊಸ ಪ್ಲಾನ್ ಮಾಡಿದ್ದಾರೆ.
![ಹhaveri](https://etvbharatimages.akamaized.net/etvbharat/prod-images/kn-hvr-04-social-distance-7202143_25032020112949_2503f_1585115989_381.jpg)
ಔಷಧಿ ಅಂಗಡಿ, ಪಡಿತರ ಅಂಗಡಿ, ದಿನಸಿ ವಸ್ತುಗಳ ಅಂಗಡಿಗಳ ಮುಂದೆ ಸುಣ್ಣದಿಂದ ಬಾಕ್ಸ್ ಚಿತ್ರ ಬರೆಸಿದ್ದಾರೆ. ಅದ್ರಲ್ಲೇ ಜನರು ನಿಂತುಕೊಂಡು ಸಾಮಾಜಿಕ ಅಂತರ್ ಕಾಯ್ದುಕೊಂಡು ದಿನಸಿ ವಸ್ತುಗಳನ್ನ ಒಯ್ಯುವಂತೆ ಪ್ಲಾನ್ ಮಾಡಿದ್ದಾರೆ.
ಹಿರೇಕೇರೂರು ತಹಶೀಲ್ದಾರ ಆರ್.ಎಚ್.ಬಾಗವಾನ, ಸಿಪಿಐ ಮಂಜುನಾಥ ಪಂಡಿತ ಮಾಡಿರೋ ಈ ಪ್ಲಾನ್ ನಿಂದ ಪಟ್ಟಣದ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಔಷಧಿ, ಪಡಿತರ ಸೇರಿದಂತೆ ದಿನಸಿ ವಸ್ತುಗಳನ್ನ ಖರೀದಿಸಿಕೊಂಡು ಮನೆಗೆ ಹೋಗ್ತಿದ್ದಾರೆ.