ಹಾವೇರಿ : ಮಹಮ್ಮದ್ ಅಲಿ ಜಿನ್ನಾ ಹಾಗೂ ಸಾವರ್ಕರ್ ಒಂದೇ ಎಂಬ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಅವರಿಗೆ ಇನ್ನೊಮ್ಮೆ ಇತಿಹಾಸ ಓದು ಅಂತಾ ಹೇಳಬೇಕು ಎಂದಿದ್ದಾರೆ.
ರಾಣೆಬೆನ್ನೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಅವರಿಗೆ ಯಾವಾಗಲೂ ಕೂಡ ಜಿನ್ನಾನೆ ಕನಸಿನಲ್ಲಿ ಬರೋದು. ಜಿನ್ನಾ ಅಂದ್ರೆ ಕಾಂಗ್ರೆಸ್ ನವರಿಗೆ ಬಹಳ ಪ್ರೀತಿ, ಯಾಕಂದ್ರೆ ದೇಶವನ್ನೇ ಒಡೆದು ಆಡಳಿತಕ್ಕೆ ಬಂದವರು ಅವರು. ಹೀಗಾಗಿ ಇದರ ಬಗ್ಗೆ ವಿಶ್ಲೇಷಣೆ ಮಾಡೋ ಅವಶ್ಯಕತೆಯೂ ಇಲ್ಲ, ಆಶ್ಚರ್ಯವೂ ಇಲ್ಲ ಎಂದು ಲೇವಡಿ ಮಾಡಿದರು.
ಸರ್ಕಾರದ ಮೇಲಿನ ಪರ್ಸೆಂಟೇಜ್ ಆರೋಪ ವಿಚಾರ ಕುರಿತಂತೆ ಮಾತನಾಡಿದ ಬೊಮ್ಮಾಯಿ, ಇದೊಂದು ರಾಜಕೀಯ ಪ್ರೇರಿತವಾದ ಆರೋಪ. ಏನಾದರೂ ದಾಖಲೆಗಳಿದ್ದರೆ ಅವರು ಕೊಡಬೇಕು. ಲೋಕಾಯುಕ್ತ ಸಂಸ್ಥೆಯನ್ನೇ ಮಾಡಿದ್ದೇವೆ. ಅದರಲ್ಲಿ ತನಿಖೆಯಾಗಲಿ, ಸತ್ಯ ಹೊರಗೆ ಬರಲಿ ಎಂದರು.
ಇದನ್ನೂ ಓದಿ: ಸಾವರ್ಕರ್ ಒಬ್ಬ ರಣಹೇಡಿ, ದೇಶದ್ರೋಹಿ: ಶಾಸಕ ಯತೀಂದ್ರ ಸಿದ್ದರಾಮಯ್ಯ