ETV Bharat / state

ಹೈ ಕೋರ್ಟ್​ ಆದೇಶಕ್ಕೆ ನಾನು ಪ್ರತಿಕ್ರಿಯೆ ಕೊಡಲ್ಲ: ಎಂ ಪಿ ರೇಣುಕಾಚಾರ್ಯ - ಕೆಂಪಣ್ಣ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

ಅದು ಈದ್ಗಾ ಮೈದಾನ ಅಲ್ಲ ಕಂದಾಯ ಇಲಾಖೆಯ ಮೈದಾನ. ಹೈ ಕೋರ್ಟ್​ ಆದೇಶಕ್ಕೆ ನಾನು ಪ್ರತಿಕ್ರಿಯೆ ಕೊಡಲ್ಲ. ಆದ್ರೆ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದರು.

Mp Renukacharya
ಶಾಸಕ ಎಂ ಪಿ ರೇಣುಕಾಚಾರ್ಯ
author img

By

Published : Aug 25, 2022, 10:17 PM IST

ಹಾವೇರಿ: ಈದ್ಗಾ ಮೈದಾನದ ವಿಚಾರದಲ್ಲಿ ಹೈಕೋರ್ಟ್ ಯಥಾಸ್ಥಿತಿ ಕಾಪಾಡುವ ಕುರಿತಂತೆ ನೀಡಿದ ಆದೇಶಕ್ಕೆ ನಾನು ಪ್ರತಿಕ್ರಿಯೆ ಕೊಡಲ್ಲ ಎಂದು ಶಾಸಕ ಎಂ ಪಿ ರೇಣುಕಾಚಾರ್ಯ ತಿಳಿಸಿದ್ದಾರೆ.

ರಾಣೆಬೆನ್ನೂರಿನಲ್ಲಿ ಮಾತನಾಡಿದ ಅವರು, ನನಗೆ ಬಹಳ ನೋವಾಗಿದೆ. ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ. ಅದು ಈದ್ಗಾ ಮೈದಾನ ಅಲ್ಲ ಕಂದಾಯ ಇಲಾಖೆಯ ಮೈದಾನ. ಹಿಂದೆ ಬ್ರಿಟೀಷರು ಜನ ಸೇರಿದ್ರೆ ಬಂಧಿಸುತ್ತಿದ್ದರು. ಆಗ ಬಾಲಗಂಗಾಧರ ತಿರಕರು ಗಣೇಶನನ್ನು ಪ್ರತಿಷ್ಠಾಪಿಸಿ ಬ್ರಿಟೀಷರ ವಿರುದ್ದ ಹೋರಾಟ ಮಾಡುವುದಕ್ಕೆ ಸಂಘಟನೆ ಮಾಡುತ್ತಿದ್ದರು. ನಮ್ಮ ಎಲ್ಲ ಹಿಂದೂಗಳು ಗಣೇಶೋತ್ಸವವನ್ನು ಅದ್ಧೂರಿಯಾಗಿ ಮಾಡಬೇಕು ಎಂದು ರೇಣುಕಾಚಾರ್ಯ ಹೇಳಿದರು.

ಶಾಸಕ ಎಂ ಪಿ ರೇಣುಕಾಚಾರ್ಯ

ಕೆಂಪಣ್ಣ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ: ರಾಜ್ಯ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು. ಹಾದಿ ಬೀದಿಯಲ್ಲಿ ಹೋಗೋರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಮುಖಂಡರ ಮನೆಯಲ್ಲಿ ಕುಳಿತುಕೊಂಡು ಡ್ರಾಫ್ಟ್‌​ ರೆಡಿ ಮಾಡಿ ನಮ್ಮ ಪ್ರಧಾನಿಗಳಿಗೆ ಕಳಿಸಿಕೊಟ್ಟಿದ್ದೀರಿ. ನಿನ್ನೆ ಪ್ರತಿಪಕ್ಷದ ನಾಯಕರ ಮನೆಯಲ್ಲಿ ಕುಳಿತು ಏನೇನು ಮಾತಾಡಿದ್ದೀರಿ ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.

ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಯಥಾಸ್ಥಿತಿಗೆ ಹೈಕೋರ್ಟ್ ನಿರ್ದೇಶನ

ಇದೆಲ್ಲಾ ಒಂದು ಷಡ್ಯಂತ್ರ. ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಮೇಲಿಂದ ಮೇಲೆ ಈ ರೀತಿ ಆರೋಪಗಳನ್ನು ಮಾಡಿಸುತ್ತಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.