ಹಾವೇರಿ: ನನ್ನ ಹೆಸರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಆರೋಪಿಸಿರುವ ಸೊಗಡು ಶಿವಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಕರವಳ್ಳಿ ಗ್ರಾಮದ ಬಳಿ ಮಾತನಾಡಿದ ಅವರು, ದಾರಿಯಲ್ಲಿ ಹೋಗುವವರು ಬರುವವರು ಕಲ್ಲು ಒಗೆಯುವವರ ಬಗ್ಗೆ ಪ್ರತಿಕ್ರಿಯೆ ನೀಡುವ ಅನಿವಾರ್ಯತೆ ಇಲ್ಲ. ಸೊಗಡು ಶಿವಣ್ಣ ಯಾರು? ದೇಶದ ಮೂರು ಪ್ರಮುಖ ಇಲಾಖೆಗಳು ನನ್ನ ಆಸ್ತಿ ಕುರಿತಂತೆ ತನಿಖೆ ಮಾಡಿ ವರದಿ ನೀಡಿವೆ. ಸೊಗಡು ಶಿವಣ್ಣ ತಮ್ಮ ಬಳಿ ಯಾವುದಾದರೂ ಸಂಸ್ಥೆಯಿದ್ದರೆ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದ ಅವರು, ಒಂದು ವೇಳೆ ಆ ರೀತಿ ಅಕ್ರಮ ಅಸ್ತಿ ನನ್ನ ಬಳಿ ಇದ್ದರೆ, ಅವರ ಮನೆಗೆ ಹೋಗಿ ಗಿಫ್ಟ್ ನೀಡಿ ಬರುವುದಾಗಿ ತಿಳಿಸಿದರು.
ಚುನಾವಣೆ ಪ್ರಚಾರದಲ್ಲಿದ್ದ ಕಾರಣ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರ ಟ್ವೀಟ್ ನೋಡಲಾಗಿಲ್ಲ. ಕುಮಾರಸ್ವಾಮಿ ಅಣ್ಣ, ನಾವು ನಿಮ್ಮಷ್ಟು ಅವಕಾಶವಾದಿಗಳಲ್ಲ. ಖಂಡಿತವಾಗಿ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಕರುಣೆ ಇಟ್ಟಿಕೊಂಡಿದ್ದೇವೆ ಎಂದರು.
ಇದನ್ನೂ ಓದಿ: ಜಾಮೀನು ಭದ್ರತೆಗೆ ಅನ್ಯರ ಜಮೀನು ದುರ್ಬಳಕೆ ಆರೋಪ: ತನಿಖೆ ನಡೆಸಲು ಹೈಕೋರ್ಟ್ ಆದೇಶ