ಹಾವೇರಿ: ಮಹಾಮಾರಿ ಕೊರೊನಾ ನಡುವೆಯೂ ರಾಣೆಬೆನ್ನೂರ ಶಾಸಕ ಅರುಣಕುಮಾರ ಪೂಜಾರ ತಮ್ಮ ಅಭಿಮಾನಿಗಳ ಜತೆ ಸೇರಿ ಭರ್ಜರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ರಾಣೆಬೆನ್ನೂರ ನಗರದ ತಮ್ಮ ಸ್ವಗೃಹ ಮತ್ತು ಕೊಡಿಯಾಲ ಹೊಸಪೇಟೆ ಗ್ರಾಮದಲ್ಲಿ ಶಾಸಕ ತಮ್ಮ 42ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ರಾಣೆಬೆನ್ನೂರ ತಾಲೂಕಿನಲ್ಲಿ ದಿನ ನಿತ್ಯ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಕೊರೊನಾ ಬಗ್ಗೆ ಜನರಿಗೆ ಜಾಗೃತಿ ಮತ್ತು ಸಾಮಾಜಿಕ ಅಂತರ ಬಗ್ಗೆ ಅರಿವು ಮೂಡಿಸಬೇಕಾದ ಶಾಸಕರು ಯಾವುದೇ ಪರಿಜ್ಞಾನವಿಲ್ಲದೇ ನೂರಾರು ಜನರನ್ನು ಸೇರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಎಷ್ಟು ಸರಿ ಎಂದು ಜನರು ಮಾತನಾಡುವಂತಾಗಿದೆ.
ಜನರಿಗೆ ಮಾದರಿಯಾಗಬೇಕಾಗಿದ್ದ ಶಾಸಕರು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ಶಾಸಕರ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.