ಹಾವೇರಿ: ನಾಪತ್ತೆಯಾಗಿದ್ದ ಬಾಲಕಿವೋರ್ವಳ ಮೃತದೇಹ ರಟ್ಟೀಹಳ್ಳಿಯ ಚಿಕ್ಕಮೊರಬ ಗ್ರಾಮದ ಬಳಿ ಇರೋ ಕುಮುದ್ವತಿ ನದಿಯಲ್ಲಿ ಪತ್ತೆಯಾಗಿದೆ.
ನ. 13ರಂದು ಜಮೀನಿನಲ್ಲಿರುವ ತಂದೆಗೆ ಊಟ ಕೊಟ್ಟು ಬರುತ್ತೇನೆ ಎಂದು ಹೋದ 17 ವರ್ಷದ ಬಾಲಕಿ ಮನೆಗೆ ವಾಪಸ್ ಬರದೆ ನಾಪತ್ತೆಯಾಗಿದ್ದಳು. ಅದೇ ದಿನ ಮನೆಯವರು ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದ್ರೆ ಇದೀಗ ನಾಲ್ಕು ದಿನಗಳ ಬಳಿಕ ಬಾಲಕಿ ಮೃತದೇಹ ಕುಮುದ್ವತಿ ನದಿಯಲ್ಲಿ ಪತ್ತೆಯಾಗಿದೆ.
ಈ ಪ್ರಕರಣ ಹಿರೇಕೆರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.