ETV Bharat / state

ರೈತರಿಗೆ ಅನ್ಯಾಯವಾಗಿದ್ದರೆ ಪರಿಹಾರ ವಿಳಂಬ ಮಾಡುವುದಿಲ್ಲ: ಸಚಿವ ಶಿವಾನಂದ ಪಾಟೀಲ್​

2020ರಲ್ಲಿ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2021ರಲ್ಲಿ 600ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2023ರಲ್ಲೂ 500ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ್​ ಹೇಳಿದ್ದಾರೆ.

minister-shivananda-patil-statement
ರೈತರಿಗೆ ಅನ್ಯಾಯವಾಗಿದ್ದರೆ ಪರಿಹಾರ ವಿಳಂಬ ಮಾಡುವುದಿಲ್ಲ : ಸಚಿವ ಶಿವಾನಂದ ಪಾಟೀಲ್​
author img

By ETV Bharat Karnataka Team

Published : Sep 5, 2023, 6:23 PM IST

ರೈತರಿಗೆ ಅನ್ಯಾಯವಾಗಿದ್ದರೆ ಪರಿಹಾರ ವಿಳಂಬ ಮಾಡುವುದಿಲ್ಲ : ಸಚಿವ ಶಿವಾನಂದ ಪಾಟೀಲ್​

ಹಾವೇರಿ : ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಯ ಸಂಖ್ಯೆ ಹೆಚ್ಚಿದೆ. ಈ ಸಮಸ್ಯೆ ಇಂದು ನಿನ್ನೆಯದಲ್ಲ. ರೈತರ ಆತ್ಮಹತ್ಯೆಯ ನಿಖರ ಸಂಖ್ಯೆ ತಿಳಿಯಲು ಎಫ್​ಎಸ್ಎಲ್​ ವರದಿ ಬರುವವರೆಗೂ ಕಾಯಬೇಕು ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2020ರಲ್ಲಿ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2021ರಲ್ಲಿ 600ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2023ರಲ್ಲೂ 500ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್ ಎಫ್ಐಆರ್​ನಲ್ಲಿ ರೈತ ಆತ್ಮಹತ್ಯೆ ಎಂದು ದಾಖಲಾದ ಕೂಡಲೇ ಅದನ್ನು ರೈತ ಆತ್ಮಹತ್ಯೆ ಎನ್ನುವುದು ತಪ್ಪು ಎಂದು ಹೇಳಿದರು.

ಹಾವೇರಿ ಜಿಲ್ಲೆಯಲ್ಲಿ 2021ರಲ್ಲಿ 590, 2022ರಲ್ಲಿ 651, 2023ರಲ್ಲಿ 412 ಸ್ವಾಭಾವಿಕ ಆತ್ಮಹತ್ಯೆಗಳು ವರದಿಯಾಗಿವೆ. ವಿವಿಧ ಕಾರಣಗಳಿಂದ ಆತ್ಮಹತ್ಯೆಗಳು ನಡೆಯುತ್ತವೆ. ಪ್ರೇಮ ವೈಫಲ್ಯದಿಂದ ಆತ್ಮಹತ್ಯೆಗಳಾಗಿವೆ. ಅವುಗಳೆನ್ನೆಲ್ಲ ರೈತ ಆತ್ಮಹತ್ಯೆಗಳು ಎಂದರೆ ಹೇಗೆ ?. ರೈತ ಆತ್ಮಹತ್ಯೆಗಳ ಸಂಖ್ಯೆಯನ್ನು ಎಫ್ಎಸ್ಎಲ್ ರಿಪೋರ್ಟ್ ಆಧರಿಸಿ ನೀಡಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಎಫ್ಎಸ್ಎಲ್ ವರದಿ ಬಂದ ಬಳಿಕ ಆತ್ಮಹತ್ಯೆ ಎಂದು ಬರೆಯುವುದು ಸೂಕ್ತ. ಜನರಲ್ಲಿ ಆತಂಕ ಮೂಡಿಸುವ ರೀತಿಯಲ್ಲಿ ಆತ್ಮಹತ್ಯೆಗಳ ವರದಿ ಮಾಡುವುದು ಸರಿಯಲ್ಲ. ಬೇರೆ ಬೇರೆ ಕಾರಣಗಳಿಂದ ಆತ್ಮಹತ್ಯೆ ಮಾಡಿದರೂ ಪರಿಹಾರ ಸಿಗುತ್ತದೆ ಎಂಬ ದುರಾಸೆಯಿಂದ ರೈತ ಆತ್ಮಹತ್ಯೆ ಎಂದು ದಾಖಲು ಮಾಡಿರಬಹುದು. ಹಾಗಾಗಿ ಎಫ್ಎಸ್ಎಲ್ ವರದಿ ಬರುವ ಮುಂಚೆಯೇ ರೈತ ಆತ್ಮಹತ್ಯೆ ಎನ್ನುವುದು ತಪ್ಪಾಗುತ್ತದೆ ಎಂದರು.

ವೀರೇಶ್ ಆಯೋಗದ ವರದಿ ಬರುವವರೆಗೆ ರೈತರ ಆತ್ಮಹತ್ಯೆಗಳು ಕಡಿಮೆ ಇದ್ದವು. ಆದರೆ, ಆಯೋಗದ ವರದಿ ಪ್ರಕಟವಾದ ನಂತರ ರೈತರ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಳವಾಗಿದೆ. 2015ರ ನಂತರ ಸರ್ಕಾರದಿಂದ ರೈತ ಆತ್ಮಹತ್ಯೆಗೆ 5 ಲಕ್ಷ ಪರಿಹಾರ ನೀಡಲು ಶುರು ಮಾಡಿದೆವು. ಬಳಿಕ ರೈತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ರೈತನಿಗೆ ನಿಜವಾಗಿ ಅನ್ಯಾಯವಾಗಿದ್ದರೆ ಸರ್ಕಾರ ಯಾವುದೇ ಕಾರಣಕ್ಕೂ ಪರಿಹಾರ ನೀಡುವಲ್ಲಿ ವಿಳಂಬ ಮಾಡುವುದಿಲ್ಲ. ಆದರೆ ಪರಿಹಾರಕ್ಕಾಗಿ ಜನರು ಜನಪ್ರತಿನಿಧಿಗಳ ಮೇಲೆ ಒತ್ತಡ ಹಾಕುವುದು ಸರಿಯಲ್ಲ ಎಂದು ಹೇಳಿದರು.

ರೈತ ಆತ್ಮಹತ್ಯೆ ಕುರಿತಂತೆ ಉಪವಿಭಾಗಾಧಿಕಾರಿಗಳ ಬಳಿ ಮಾನದಂಡಗಳ ಪಟ್ಟಿ ಇದೆ. ಸಾಲಭಾದೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡರೇ ಅಂತಹ ರೈತನಿಗೆ ರೈತ ಸಂಘಟನೆ ಮುಖಂಡರು ಪರಿಹಾರ ದೊರಕಿಸುವ ಪ್ರಯತ್ನ ಮಾಡಬೇಕು. ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳಲ್ಲಿ ಪರಿಹಾರ ನೀಡುವಲ್ಲಿ ವಿಳಂಬವಾಗಿಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿನ 196 ತಾಲೂಕುಗಳನ್ನ ಬರಪೀಡಿತ ಎಂದು ಘೋಷಣೆ ಮಾಡುವದಾಗಿ ಕಂದಾಯ ಸಚಿವರು ತಿಳಿಸಿದ್ದಾರೆ. ಇದರಲ್ಲಿ ಹಾವೇರಿ ಜಿಲ್ಲೆಯ ಮೂರು ತಾಲೂಕುಗಳಿವೆ. ರಾಜ್ಯದಲ್ಲಿ ಮೋಡ ಬಿತ್ತನೆ ಕುರಿತಂತೆ ನಿರ್ಧಾರ ಕೈಗೊಂಡರೆ ಮೋಡ ಬಿತ್ತನೆ ಮಾಡಿಸುತ್ತೇವೆ. ಇಲ್ಲದಿದ್ದರೇ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ : ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿ ಬರಪೀಡಿತ ತಾಲೂಕುಗಳ ಘೋಷಣೆ: ಸಚಿವ ಹೆಚ್.ಸಿ ಮಹಾದೇವಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.