ETV Bharat / state

ಸ್ಥಳೀಯ ಕಾಂಗ್ರೆಸ್​ ಮುಖಂಡರು ಸಿದ್ದರಾಮಯ್ಯರಿಗೆ ತಪ್ಪು ಸಂದೇಶ ನೀಡಿದ್ದಾರೆ : ಬಿ.ಸಿ. ಪಾಟೀಲ್ - farmers protest at Rattihalli of Haveri

ರಟ್ಟಿಹಳ್ಳಿಯ ಸ್ಥಳೀಯ ಕಾಂಗ್ರೆಸ್​ ಮುಖಂಡರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಪ್ಪು ಸಂದೇಶ ನೀಡಿ ಹೋರಾಟಕ್ಕೆ ಕರೆ ತಂದಿದ್ದಾರೆ. ರೈತರ ಹೋರಾಟದಲ್ಲಿ ರೈತರಿಗಿಂತ ಕಾಂಗ್ರೆಸ್​ನವರೇ ಹೆಚ್ಚಿದ್ದಾರೆ ಎಂದು ಸಚಿವ ಬಿ.ಸಿ. ಪಾಟೀಲ್ ಆರೋಪಿಸಿದ್ದಾರೆ.

Minister BC Patil Visits farmers protest site at Rattihalli
ಹೋರಾಟ ನಿರತ ರೈತರ ಸಮಸ್ಯೆ ಆಲಿಸಿದ ಸಚಿವ ಬಿ.ಸಿ ಪಾಟೀಲ್
author img

By

Published : Dec 13, 2020, 5:10 PM IST

ಹಾವೇರಿ : ಸ್ಥಳೀಯ ಕಾಂಗ್ರೆಸ್ ಮುಖಂಡರು ತಮ್ಮ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ರೈತರ ಹೋರಾಟದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಕರೆತಂದಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ದೂರಿದ್ದಾರೆ.

ರಟ್ಟಿಹಳ್ಳಿಯಲ್ಲಿ ರೈತರನ್ನು ಭೇಟಿಯಾದ ಸಚಿವ ಬಿ.ಸಿ ಪಾಟೀಲ್ :

ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ನೀರಾವರಿ ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ ರೈತರು ಹೋರಾಟ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸ್ಥಳೀಯ ಕಾಂಗ್ರೆಸ್​ ಮುಖಂಡರು ಸಿದ್ದರಾಮಯ್ಯರಿಗೆ ತಪ್ಪು ಸಂದೇಶ ನೀಡಿದ್ದಾರೆ. ಹೈಕೋರ್ಟ್ ಹಿರಿಯ ನ್ಯಾಯವಾದಿ ಬಿ.ಡಿ. ಹಿರೇಮಠ ಹೋರಾಟ ನಡೆಸುತ್ತಿರುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಇದರಲ್ಲಿ ಕಾಂಗ್ರೆಸ್​ನ ಮುಖಂಡರು ಅಧಿಕವಾಗಿದ್ದಾರೆ ಎಂದರು.

ಹೋರಾಟ ನಿರತ ರೈತರ ಸಮಸ್ಯೆ ಆಲಿಸಿದ ಸಚಿವ ಬಿ.ಸಿ. ಪಾಟೀಲ್

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಯುಟಿಪಿ ಸಮಸ್ಯೆ ಬಗೆಹರಿಸಬಹುದಿತ್ತು, ಕಾಂಗ್ರೆಸ್​ನವರು ಅವಾಗ ಯಾಕೆ ಸುಮ್ಮನಿದ್ದರು ಎಂದು ಸಚಿವ ಪಾಟೀಲ್​ ಪ್ರಶ್ನಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.