ಹಾವೇರಿ: ಕೃಷಿ ಸಚಿವ ಬಿ ಸಿ ಪಾಟೀಲ ಶನಿವಾರ ಹಾವೇರಿ ಜಿಲ್ಲೆ ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕಿನ ವಿವಿಧ ಗ್ರಾಮಗಳ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿರುವ ಸಿದ್ಧತೆಗಳನ್ನ ಪರಿಶೀಲನೆ ನಡೆಸಿದರು.
ಮಾಸೂರು, ರಟ್ಟೀಹಳ್ಳಿ, ಕೋಡ, ಹಂಸಭಾವಿ, ಚಿಕ್ಕೇರೂರು ಸೇರಿ ವಿವಿಧ ಗ್ರಾಮಗಳ ಆಸ್ಪತ್ರೆಗಳಿಗೆ ಭೇಟಿ ನೀಡಿದ ಸಚಿವ ಬಿ ಸಿ ಪಾಟೀಲ ವೈದ್ಯರ ಜೊತೆ ಚರ್ಚಿಸಿದರು. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಆಸ್ಪತ್ರೆ ಸಿಬ್ಬಂದಿ ಜೊತೆ ಪಾಟೀಲ್ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಕೆಲಸದ ಬಗ್ಗೆ ವಿವರಣೆ ಪಡೆದರು. ಕೆಲಸಕ್ಕೆ ಗೈರು ಹಾಜರಾದ ಕೋಡ ಸರ್ಕಾರಿ ಆಸ್ಪತ್ರೆಯ ಇಬ್ಬರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಬ್ಬರು ಬೇವಾಬ್ದಾರಿ ವೈದ್ಯರನ್ನು ಅಮಾನತ್ತು ಮಾಡಿ ಕೇಸ್ ದಾಖಲಿಸುವಂತೆ ಸೂಚನೆ ನೀಡಿದರು.