ರಾಣೆಬೆನ್ನೂರು(ಹಾವೇರಿ): ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಟಿಪ್ಪರ್ಗಳ ಮೂಲಕ ಕಲ್ಲುಗಳನ್ನು ನಿರಂತರವಾಗಿ ಸಾಗಿಸಲಾಗುತ್ತಿದೆ. ಇಲ್ಲಿನ ವೆಂಕಟಾಪುರ, ಕಾಕೋಳ, ದೇವರಗುಡ್ಡ ಗ್ರಾಮಗಳಿಂದ ಗಣಿ ಮೂಲಕ ಕಲ್ಲು ಸಾಗಿಸುತ್ತಿರುವುದು ಈ ಭಾಗದ ಜನರಿಗೆ ಆತಂಕ ಮೂಡಿಸಿದೆ.
ಗಣಿಯಿಂದ ಹಗಲು-ರಾತ್ರಿ ಎನ್ನದೆ ಲಾರಿಯಲ್ಲಿ ಕಲ್ಲುಗಳನ್ನು ಸಾಗಿಸುತ್ತಿದ್ದು, ಹೆದ್ದಾರಿಯಲ್ಲಿ ಸಾಗುವಾಗ ಟಿಪ್ಪರ್ನ ಹಿಂಬದಿ ಟ್ರಾಲಿ ತೆರೆದುಕೊಂಡೇ ಇರುತ್ತದೆ. ಇದು ವಾಹನ ಸವಾರರ ಭಯಕ್ಕೆ ಕಾರಣವಾಗಿದೆ.
ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಈ ವೇಳೆ ಹೆದ್ದಾರಿಯಲ್ಲಿ ಕಲ್ಲುಗಳು ಉರುಳಿಬಿದ್ದರೆ ಹಿಂದೆ ಬರುತ್ತಿರುವ ವಾಹನ ಸವಾರರು ಅಪಘಾತದಂತಹ ಪರಿಸ್ಥಿತಿ ಎದುರಿಸಬೇಕಾಗುವ ಸಂಭವವಿದೆ.
ಇಷ್ಟೆಲ್ಲಾ ನಡೆಯುತ್ತಿದ್ದರೂ ಕೂಡ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲಿ ಅಥವಾ ಸಂಬಂಧಿಸಿದ ಯಾವೊಬ್ಬ ಅಧಿಕಾರಿಯೂ ತಲೆಕೆಡಿಸಿಕೊಂಡಿಲ್ಲ ಎಂದು ಹುಲಿಹಳ್ಳಿ ಗ್ರಾಮದ ಮಾಲತೇಶ ಮಡಿವಾಳರ ಆರೋಪಿಸಿದ್ದಾರೆ.