ETV Bharat / state

ನಿಂತಿದ್ದವರ ಮೇಲೆ ಹರಿದ ಕಾರು: ಪತಿ ಸಾವು, ಪತ್ನಿ, 9 ತಿಂಗಳ ಮಗುವಿಗೆ ಗಾಯ - haveri latest accident news

ವಾಹನಕ್ಕಾಗಿ ಕಾಯುತ್ತಾ ನಿಂತಿದ್ದವರ ಮೇಲೆ ಕಾರು ಹರಿದ ಪರಿಣಾಮ ಪತಿ ಸಾವನ್ನಪ್ಪಿದ್ದು ಪತ್ನಿ ಹಾಗೂ 9 ತಿಂಗಳ ಹಸುಗೂಸು ಗಾಯಗೊಂಡ ದುರ್ಘಟನೆ ನಡೆದಿದೆ.

man dies in a car accident wife and baby injured
ಕಾರು ಹರಿದು ವ್ಯಕ್ತಿ ಸಾವು
author img

By

Published : Apr 12, 2021, 7:47 AM IST

ಹಾವೇರಿ: ರಸ್ತೆ ಪಕ್ಕದಲ್ಲಿ ನಿಂತಿದ್ದವರ ಮೇಲೆ ಕಾರು ಹರಿದಿದೆ. ದುರ್ಘಟನೆಯಲ್ಲಿ ಪತಿ ಸಾವನ್ನಪ್ಪಿ ಪತ್ನಿ ಮತ್ತು ಮಗು ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕದಮನಹಳ್ಳಿ ಕ್ರಾಸ್​ನಲ್ಲಿ ನಡೆದಿದೆ.

man dies in a car accident wife and baby injured
ಮೃತದೇಹ

ಯಲ್ಲಪ್ಪ ಲಮಾಣಿ (25) ಮೃತರಾದವರು. ಯಲ್ಲಪ್ಪನವರ ಪತ್ನಿ ರೂಪಾ (20) ಮತ್ತು ಮಗ ಒಂಬತ್ತು ತಿಂಗಳ ಶರತ್​ಗೆ ಗಾಯಗಳಾಗಿದೆ. ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗುಂಡೇನಹಳ್ಳಿ ತಾಂಡಾದಿಂದ ಚಿಕ್ಕಮಳ್ಳಳ್ಳಿಗೆ ತೆರಳಲು ವಾಹನಕ್ಕಾಗಿ ಕಾಯುತ್ತಾ ನಿಂತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಇವರ ಮೇಲೆ ಹರಿದಿದೆ. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.