ಹಾವೇರಿ: ನಿಯಂತ್ರಣ ತಪ್ಪಿ ಫುಟ್ಪಾತ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ಹುಸೇನ್ ಸಾಬ್ ಕಣವಿ (28) ಮೃತ ವ್ಯಕ್ತಿ ಎನ್ನಲಾಗಿದೆ. ನಗರದ ಗುತ್ತಲ ರಸ್ತೆಯಲ್ಲಿರೋ ರೈಲ್ವೆ ಓವರ್ ಬ್ರಿಡ್ಜ್ ಮೇಲೆ ಹಾವೇರಿಯಿಂದ ಕೆ.ಬಿ.ತಿಮ್ಮಾಪುರ ಗ್ರಾಮದತ್ತ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಹಾವೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.