ಹಾನಗಲ್/ಹಾವೇರಿ: ಹಾವು ಹಿಡಿಯಲು ಹೋಗಿದ್ದ ಉರಗ ತಜ್ಞನಿಗೆ 6 ಬಾರಿ ಹಾವು ಕಚ್ಚಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಹಾನಗಲ್ ಪಟ್ಟಣದಲ್ಲಿ ನಿನ್ನೆ ಸಂಜೆ ನಡೆದಿದೆ.
ಪಟ್ಟಣದ ಕಲ್ಲಹಕ್ಕಲ ಓಣಿಯ ನಿವಾಸಿ ಇರ್ಫಾನ್ ಸಂಗೂರ (23) ಸಾವನ್ನಪ್ಪಿದ ಉರಗ ತಜ್ಞನಾಗಿದ್ದು, ಹಲವು ವರ್ಷಗಳಿಂದ ಹಾವುಗಳನ್ನು ಹಿಡಿದು ಕಾಡಿಗೆ ಬಿಡುತ್ತಿದ್ದ. ಹಾವು ಬಂದಿದೆ ಎಂದು ಫೋನ್ ಬಂದರೆ ಸಾಕು ತಕ್ಷಣ ಹಾಜರಾಗಿ ಜೀವದ ಹಂಗು ತೊರೆದು ಹಾವು ಹಿಡಿದು ಕಾಡಿಗೆ ಬಿಡುತ್ತಿದ್ದನಂತೆ.
ಆದರೆ ನಿನ್ನೆ ದೊಡ್ಡ ಹಾವನ್ನು ಹಿಡಿಯುವ ಸಂದರ್ಭದಲ್ಲಿ ಹಾವು ಆರು ಬಾರಿ ಕಚ್ಚಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಹಾನಗಲ್ ತಾಲೂಕು ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ ಎಂದು ತಿಳಿದು ಬಂದಿದೆ.