ಹಾವೇರಿ: ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿ ಒಂದು ಗಂಡುಮೇಕೆ ಹಾಲು ನೀಡುತ್ತಿದೆ!. ಹೌದು, ಆಶ್ಚರ್ಯವಾದರೂ ಇದು ನಿಜ. ಚಮನ್ ಶಾವಲಿ ಗಲ್ಲಿಯಲ್ಲಿರುವ ಸಾದಿಕ್ ಮಕಾನದಾರ್ ಎಂಬುವವರ ಮನೆಯಲ್ಲಿರುವ ಸುಮಾರು 1 ವರ್ಷ 6 ತಿಂಗಳಿನ ಗಂಡುಮೇಕೆ ದಿನಕ್ಕೆ ಒಂದು ಲೋಟದಿಂದ ಸುಮಾರು ಅರ್ಧ ಲೀಟರ್ವರೆಗೆ ಹಾಲು ನೀಡುತ್ತಿದೆ ಎಂದು ತಿಳಿಸಿದ್ದಾರೆ.
ಸಾದಿಕ್ ಈ ಹಿಂದೆ ಒಂದು ಹೆಣ್ಣು ಮೇಕೆ ಸಾಕಿದ್ದರು. ಆ ಮೇಕೆ ಗಂಡು ಮರಿ ಹಾಕಿ ಸಾವನ್ನಪ್ಪಿದೆ. ಈ ಮರಿ ಗಂಡು ಮೇಕೆಯನ್ನು ಕುಟುಂಬಸ್ಥರು ದೇವರಿಗೆಂದು ಬಿಟ್ಟಿದ್ದಾರೆ. ದೇವರಿಗೆ ಬಿಟ್ಟಿರುವ ಈ ಮೇಕೆಯೀಗ ಹಾಲು ನೀಡುತ್ತಿದೆ. ಇದಕ್ಕೆ ಸುಲ್ತಾನ್ ಎಂದು ಹೆಸರಿಟ್ಟಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಬಂದು ಗಂಡು ಮೇಕೆ ಹಾಲು ನೀಡುವುದನ್ನು ನೋಡಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಮೇಕೆ ಮಾಲೀಕ ಸಾದಿಕ್ ಮಕಾನದಾರ್ ಮಾತನಾಡಿ, 'ಈ ಗಂಡು ಮೇಕೆಯನ್ನು ನಾವು ದೇವರಿಗೆ ಬಿಟ್ಟಿದ್ದು ಎಲ್ಲ ಮೇಕೆಗಳಂತೆ ಜೋಪಾನವಾಗಿ ನೋಡಿಕೊಳ್ಳುತ್ತಿದ್ದೇವೆ. ಇದಕ್ಕೆ ಪ್ರತಿ ದಿನ ಹಾಲು ಸೇರಿದಂತೆ ವಿವಿಧ ದವಸ ಧಾನ್ಯಗಳು, ತರಕಾರಿ ತಿನ್ನಿಸುತ್ತೇವೆ' ಎಂದರು.
ಇದನ್ನೂ ಓದಿ: ಉತ್ತರ ಕನ್ನಡ: ಸೇತುವೆ ನಿರ್ಮಿಸಿ ಸಂಪರ್ಕ ರಸ್ತೆಗೇಕೆ ನಿರ್ಲಕ್ಷ್ಯ?
ಈ ಕುರಿತಂತೆ ಪಶು ವೈದ್ಯರನ್ನು ಕೇಳಿದರೆ, 'ಈ ರೀತಿಯ ಪ್ರಕರಣಗಳ ಸಂಖ್ಯೆ ಬಹಳ ವಿರಳ. ಕೆಲವು ಹಾರ್ಮೋನ್‌ಗಳ ಸ್ರವಿಸುವಿಕೆ ಹೆಚ್ಚು-ಕಡಿಮೆಯಾದಾಗ ಈ ರೀತಿ ಗಂಡು ಪ್ರಾಣಿಗಳು ಹಾಲು ನೀಡುತ್ತವೆ. ಇನ್ನು ಕೆಲ ಹೆಣ್ಣು ಪ್ರಾಣಿಗಳು ಸಹ ಗರ್ಭ ಧರಿಸದೇ ಹಾಲು ನೀಡಲು ಹಾರ್ಮೋನ್‌ಗಳ ಸ್ರವಿಸುವಿಕೆ ಹೆಚ್ಚು ಕಡಿಮೆಯಾಗುವುದೇ ಕಾರಣ' ಎಂದು ತಿಳಿಸಿದರು.