ETV Bharat / state

ಹಾವೇರಿ ಜಿಲ್ಲೆಯಾದ್ಯಂತ ಸಡಗರದ ಸಂಕ್ರಾಂತಿ ಆಚರಣೆ.. - ಹಾವೇರಿ ಜಿಲ್ಲೆಯಾದ್ಯಂತ ಸಂಕ್ರಾಂತಿ ಆಚರಣೆ

ಜಿಲ್ಲೆಯ ಹಾನಗಲ್ ತಾಲೂಕಿನ ಸಂಗೂರು, ಹಾವೇರಿ ತಾಲೂಕಿನ ಕರ್ಜಗಿ, ಸವಣೂರು ತಾಲೂಕಿನ ಕಳಸೂರು, ಕುಣಿಮೆಳ್ಳಳ್ಳಿ, ದೇವಗಿರಿಯಲ್ಲಿ ಹರಿದಿರುವ ವರದಾ ನದಿಯಲ್ಲಿ ಜನರು ಪುಣ್ಯಸ್ನಾನ ಮಾಡಿದರು. ರಾಣೆಬೆನ್ನೂರು ತಾಲೂಕಿನ ಚೌಡಯ್ಯದಾನಪುರ, ಗಳಗನಾಥದಲ್ಲಿ ಜನರು ತುಂಗಭದ್ರಾ ನದಿಯಲ್ಲಿ ಮಿಂದೆದ್ದರು.

ಸಡಗರದ ಸಂಕ್ರಾಂತಿ ಆಚರಣೆ
ಸಡಗರದ ಸಂಕ್ರಾಂತಿ ಆಚರಣೆ
author img

By

Published : Jan 15, 2022, 8:40 PM IST

ಹಾವೇರಿ : ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಮಕರ ಸಂಕ್ರಾಂತಿ ಆಚರಿಸಲಾಯಿತು. ಶನಿವಾರ ಮುಂಜಾನೆಯಿಂದಲೇ ನದಿಗಳಿಗೆ ತೆರಳಿದ ಜನರು ನೀರಿನಲ್ಲಿ ಮಿಂದೆದ್ದರು. ಸ್ನಾನ ಮಾಡಿ, ಪರಸ್ಪರ ಎಳ್ಳುಬೆಲ್ಲ ಹಚ್ಚಿಕೊಂಡರು. ನಂತರ ಗಂಗಾದೇವಿಗೆ ಪೂಜೆ ಸಲ್ಲಿಸಿದರು.

ಹಾವೇರಿ ಜಿಲ್ಲೆಯಾದ್ಯಂತ ಸಡಗರದ ಸಂಕ್ರಾಂತಿ ಆಚರಣೆ

ವೀಕೆಂಡ್ ಕರ್ಫ್ಯೂ ನಡುವೆಯೂ ಸಹ ನದಿಮೂಲಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಮಕರ ಸಂಕ್ರಾಂತಿಯಲ್ಲಿ ಪಾಲ್ಗೊಂಡಿದ್ದರು. ಹಾನಗಲ್ ತಾಲೂಕಿನ ಕೂಡಲದಲ್ಲಿ ಭಕ್ತರು ತಂಡೋಪತಂಡವಾಗಿ ಬಂದು ಸಂಕ್ರಾಂತಿ ಸಡಗರದಲ್ಲಿ ಮುಳುಗಿದ್ದರು. ವರದಾ ಮತ್ತು ಧರ್ಮಾ ನದಿಗಳ ಸಂಗಮದಲ್ಲಿ ಪೂಜೆ ನೆರವೇರಿಸಿದರು. ಸಂಗಮ ಸ್ಥಳದಲ್ಲಿ ಸ್ನಾನ ಮಾಡಿದ ಜನರು ನಂತರ ಗಂಗಾದೇವಿಗೆ ಪೂಜೆ ಸಲ್ಲಿಸಿದರು. ನಂತರ ಸಹ ಪಂಕ್ತಿ ಭೋಜನ ಸವಿದರು. ಕೂಡಲದ ಗುರುನಂಜೇಶ್ವರ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಜಿಲ್ಲೆಯ ಹಾನಗಲ್ ತಾಲೂಕಿನ ಸಂಗೂರು, ಹಾವೇರಿ ತಾಲೂಕಿನ ಕರ್ಜಗಿ, ಸವಣೂರು ತಾಲೂಕಿನ ಕಳಸೂರು, ಕುಣಿಮೆಳ್ಳಳ್ಳಿ, ದೇವಗಿರಿಯಲ್ಲಿ ಹರಿದಿರುವ ವರದಾ ನದಿಯಲ್ಲಿ ಜನರು ಪುಣ್ಯಸ್ನಾನ ಮಾಡಿದರು. ರಾಣೆಬೆನ್ನೂರು ತಾಲೂಕಿನ ಚೌಡಯ್ಯದಾನಪುರ, ಗಳಗನಾಥದಲ್ಲಿ ಜನರು ತುಂಗಭದ್ರಾ ನದಿಯಲ್ಲಿ ಮಿಂದೆದ್ದರು. ನದಿ ತಟಗಳಿಗೆ ಜನರು ಚಕ್ಕಡಿ, ದ್ವಿಚಕ್ರವಾಹನ ಸೇರಿದಂತೆ ವಿವಿಧ ವಾಹನಗಳಲ್ಲಿ ಆಗಮಿಸಿದ್ದರು.

ಗ್ರಾಮಗಳಲ್ಲಿ ಜನರು ನದಿ ತಟಗಳಿಗೆ ತೆರಳಿ ಸಂಕ್ರಾಂತಿ ಆಚರಿಸಿದರೆ, ಕೆಲವರು ಜಮೀನುಗಳಿಗೆ ತೆರಳಿ ಹಬ್ಬದ ಊಟ ಸವಿದರು. ಸಂಕ್ರಾಂತಿಯಲ್ಲಿ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಜರ್ ಸೇರಿದಂತೆ ಕೊರೊನಾ ಮುಂಜಾಗ್ರತಾ ಕ್ರಮಗಳು ಮಾಯವಾಗಿದ್ದವು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.