ETV Bharat / state

ನಾಪತ್ತೆಯಾಗಿದ್ದ ಯುವತಿ ಪ್ರಿಯಕರನೊಂದಿಗೆ ಹೆಣವಾಗಿ ಪತ್ತೆ.. ಹಾವೇರಿಯಲ್ಲಿ ದುರಂತ - lovers commit suicide in Naganuru village of haveri

ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿವೋರ್ವಳು ತನ್ನ ಪ್ರಿಯಕರನೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ತಾಲೂಕಿನ ನಾಗನೂರು ಗ್ರಾಮದಲ್ಲಿ ನಡೆದಿದೆ.

lovers-commit-suicide-in-haveri
ಪ್ರೇಮಿಗಳಿಬ್ಬರು ಆತ್ಮಹತ್ಯೆ
author img

By

Published : Apr 25, 2021, 3:42 PM IST

ಹಾವೇರಿ: ತಾಲೂಕಿನ ನಾಗನೂರು ಗ್ರಾಮದ ಬಳಿಯ ಹೊಲದಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿದ್ಯಾಶ್ರೀ ಗಾಳಿ (22 ವರ್ಷ) ಮತ್ತು ಇರ್ಷಾದ್​ ಕುಡಚಿ (23 ವರ್ಷ) ಮೃತ ಪ್ರೇಮಿಗಳು ಎಂಬುದು ತಿಳಿದುಬಂದಿದೆ. ಏಪ್ರಿಲ್​ 24 ರಂದು ಬೆಳಗಿನ ಜಾವ ಮನೆಯಿಂದ ವಿದ್ಯಾಶ್ರೀ ನಾಪತ್ತೆಯಾಗಿದ್ದಳು. ಈ ಸಂಬಂಧ ತಾಲೂಕಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳ ಮೃತದೇಹ ಪತ್ತೆ

ಕಳೆದ ಕೆಲವು ದಿನಗಳ ಹಿಂದಷ್ಟೇ ಬೇರೊಬ್ಬ ಯುವಕನ ಜೊತೆ ವಿದ್ಯಾಶ್ರೀಗೆ ನಿಶ್ಚಿತಾರ್ಥ ಆಗಿತ್ತು. ಇದೀಗ ಯುವಕ ಇರ್ಷಾದ್​ ಕುಟುಂಬಕ್ಕೆ ಸೇರಿದ ಜಮೀನಿನಲ್ಲೇ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಹಾವೇರಿ ಗ್ರಾಮೀಣ ಠಾಣೆ ಸಿಪಿಐ ನಾಗಮ್ಮ, ಮಹಿಳಾ ಠಾಣೆ ಸಿಪಿಐ ಚಿದಾನಂದ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಓದಿ: 'ಟೀಕಾ ಉತ್ಸವ್ ಬಾಯಿ ಬಡಾಯಿ ಬಿಟ್ಟಾಕಿ, ಮೊದಲು ಎಲ್ಲರಿಗೂ ಉಚಿತ ಲಸಿಕೆ ನೀಡಿ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.