ETV Bharat / state

ಕೆರೆ ಅಭಿವೃದ್ದಿ ಕಾಮಗಾರಿ ಹಣ ಬಿಡುಗಡೆಗೆ ಲಂಚ... ಲೋಕಾಯುಕ್ತ ಬಲೆಗೆ ತಾಂತ್ರಿಕ ತಜ್ಞ - ಶಿವಲಿಂಗಸ್ವಾಮಿ ಹಲಗಲಿಮಠ ಲೋಕಾಯುಕ್ತ ಬಲೆಗೆ

ಕೆರೆ ಅಭಿವೃದ್ದಿ ಕಾಮಗಾರಿ ಹಣ ಬಿಡುಗಡೆ ಮಾಡಲು ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ತಾಂತ್ರಿಕ ತಜ್ಞರೊಬ್ಬರ ಮೇಲೆ ಲೋಕಾಯುಕ್ತ ದಾಳಿಯಾಗಿದೆ.

bribery Accused
ಆರೋಪಿ ಶಿವಲಿಂಗಸ್ವಾಮಿ ಹಲಗಲಿಮಠ
author img

By

Published : Apr 1, 2023, 7:18 PM IST

ಹಾವೇರಿ: ಕೆರೆ ಅಭಿವೃದ್ದಿ ಕಾಮಗಾರಿ ಹಣ ಬಿಡುಗಡೆ ಮಾಡಲು ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರದ ತಾಂತ್ರಿಕ ತಜ್ಞರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಹಾವೇರಿಯಲ್ಲಿ ನಡೆದಿದೆ. ಗುತ್ತಿಗೆದಾರನಿಂದ 1 ಲಕ್ಷ 20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಿವಲಿಂಗಸ್ವಾಮಿ ಹಲಗಲಿಮಠ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.

ಗುತ್ತಿಗೆದಾರ ಸುರೇಶ ನೀಲಪ್ಪ ಕಳಸೂರು ಎಂಬುವವರಿಗೆ ಕಾಮಗಾರಿ ಹಣ ಬಿಡುಗಡೆ ಮಾಡಲು 2 ಲಕ್ಷ 20 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಈಗಾಗಲೇ ಮುಂಗಡವಾಗಿ ಶಿವಲಿಂಗಸ್ವಾಮಿ 1 ಲಕ್ಷ ರೂಪಾಯಿ ಲಂಚ ಪಡೆದಿದ್ದು, ಉಳಿದ ಹಣ ಶನಿವಾರ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಶಿವಲಿಂಗಸ್ವಾಮಿ ಹಾವೇರಿಯ ಕೆರೆ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರದಲ್ಲಿ ತಾಂತ್ರಿಕ ತಜ್ಞ ಪ್ರಭಾರಿ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಧಾರವಾಡ ಸಮೀಪದ ನವಲೂರಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮನೆ ಕಟ್ಟಲು ಲಂಚಕ್ಕೆ ಬೇಡಿಕೆ; ಅಧಿಕಾರಿಗಳಿಬ್ಬರ ಬಂಧನ: ಇತ್ತೀಚಿನ ದಿನಗಳಲ್ಲಿ ಲಂಚ ಪ್ರಕರಣಗಳು ಹೆಚ್ಚಾದಂತಿದೆ. ಇತ್ತೀಚೆಗೆ ಮನೆ ಕಟ್ಟುವ ಪರವಾನಗಿ ಪತ್ರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆಯುತ್ತಿರುವಾಗ ಚಡಚಣ ಪಟ್ಟಣ ಪಂಚಾಯಿತಿಯ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ವಿಜಯಪುರದಲ್ಲಿ ನಡೆದಿತ್ತು.

ಈ ಪ್ರಕರಣದಲ್ಲಿ ಜ್ಯೂನಿಯರ್ ಪ್ರೋಗ್ರಾಮರ್​​ ನಾಗರಾಜ್ ಅಶೋಕ ಕುಲಕರ್ಣಿ ಹಾಗೂ ದ್ವಿತೀಯ ದರ್ಜೆ ನೌಕರ ಶಿವಾನಂದ ಕಲ್ಲಪ್ಪ ಜಂಗಲಗಿ ಎಂಬವರನ್ನು ಬಂಧಿಸಲಾಗಿದೆ. ಈ ಆರೋಪಿಗಳು ಮನೆ ಕಟ್ಟುವ ವ್ಯಕ್ತಿಗೆ ಪರವಾನಗಿ ಪತ್ರ ನೀಡಲು 1ನೇ ಅಂತಸ್ತಿಗೆ 20 ಸಾವಿರ ರೂಪಾಯಿ ಲಂಚ, ಮತ್ತೇ 7 ಸಾವಿರ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಕುರಿತು ವ್ಯಕ್ತಿಯೊಬ್ಬರು ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದರು. ಹೀಗಾಗಿ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಸೂಕ್ತ ಮಾಹಿತಿಯೊಂದಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದರು.

ಮಾಡಾಳ್​ ಲಂಚ ಪ್ರಕರಣ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್​ಡಿಎಲ್‌) ರಾಸಾಯನಿಕ ವಸ್ತುಗಳನ್ನು ಪೂರೈಸುವ ಟೆಂಡರ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಪ್ರಶಾಂತ್ ಮಾಡಾಳ್ ಟೆಂಡರ್ ಆಕಾಂಕ್ಷಿಯೊಬ್ಬರಿಂದ 40 ಲಕ್ಷ ರೂ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದರು.

ಪ್ರಕರಣದಲ್ಲಿ ಮಾಡಾಳ್​ ವಿರೂಪಾಕ್ಷಪ್ಪ ಮೊದಲ ಆರೋಪಿಯಾಗಿದ್ದರು. ತದನಂತರ ಶಾಸಕರಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿತ್ತು. ಆ ಬಳಿಕ ಪ್ರಕರಣದ ಮೊದಲ ಆರೋಪಿಯಾಗಿರುವ ಅರ್ಜಿದಾರರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವುದು ಅತ್ಯಗತ್ಯವಾಗಿದೆ ಎಂದು ನ್ಯಾಯಾಲಯ ನಿರೀಕ್ಷಣಾ ಜಾಮೀನು ವಜಾಗೊಳಿಸಿತ್ತು. ನಿರೀಕ್ಷಣಾ ಜಾಮೀನು ವಜಾಗೊಂಡ ದಿನವೇ ಮಾಡಾಳ್​ ಅವರನ್ನು ಲೋಕಾಯುಕ್ತರು ಬಂಧಿಸಿದ್ದರು. ಬಳಿಕ ಕೋರ್ಟ್​ ಅವರನ್ನು ಇದು ದಿನಗಳ ಕಾಲ ಲೋಕಾಯುಕ್ತ ಕಸ್ಟಡಿಗೆ ನೀಡಿತ್ತು. ಇದೀಗ ಮಾಡಾಳ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ.

ಇದನ್ನೂ ಓದಿ: ಮಾಡಾಳ್‌ ಪ್ರಕರಣ: ಆಟೋಮಾಸ್ ಕಂಪನಿಯ ಪಾಲುದಾರರಿಗೆ ನಿರೀಕ್ಷಣಾ ಜಾಮೀನು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.