ಹಾನಗಲ್: ಲಾಕ್ಡೌನ್ ಹಿನ್ನೆಲೆ, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ 3600ಕ್ಕೂ ಹೆಚ್ಚು ಮಾವು ಬೆಳೆಗಾರರು ಭವಿಷ್ಯದ ಮಾವು ಸಾಗಾಟದ ಆತಂಕದಲ್ಲಿದ್ದಾರೆ.
ಇಲ್ಲಿಯವರೆಗೆ ರೈತರು ತಮ್ಮ ಜಮೀನನಲ್ಲಿ ಬೆಳೆದಿರುವ ವಿವಿಧ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಸಂಕಷ್ಟದಲ್ಲಿ ಸಿಲುಕಿ ಸಾಕಷ್ಟು ತೊಂದರೆಯನ್ನ ಅನುಭವಿಸಿದ್ದಾರೆ. ಇದೀಗ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ಸುಮಾರು 4000 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆದು ನಿಂತಿದ್ದು, 3600ಕ್ಕೂ ಅಧಿಕ ಮಾವು ಬೆಳೆಗಾರರಿಗೆ ಲಾಕ್ಡೌನ್ ಭೀತಿ ಎದುರಾಗಿದೆ. ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ನಮ್ಮ ಮಾವುಗಳನ್ನ ಎಲ್ಲಿಗೆ ಮತ್ತು ಹೇಗೆ ಕಳಿಸುವುದು ಎಂಬ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.
ಈ ಕೂಡಲೇ ಸರಕಾರ ಎಚ್ಚೆತ್ತುಕೊಂಡು ಮುಂದಿನ ದಿನಗಳಲ್ಲಿ ಮಾವು ಬೆಳೆಗಾರರಿಗೆ ಆಗಬಹುದಾದ ತೊಂದರೆಯನ್ನ ನಿವಾರಿಸಬೇಕು ಎಂದು ರೈತರು ಮನವಿ ಮಾಡುತ್ತಿದ್ದಾರೆ.