ETV Bharat / state

'ಶಿಗ್ಗಾಂವಿ ಟಿಕೆಟ್ ಮುಸ್ಲಿಮರಿಗೆ ಕೊಡಿ': ಹಾವೇರಿ ಜಿಲ್ಲೆಯ ಐವರು ಕಾಂಗ್ರೆಸ್ ಅಭ್ಯರ್ಥಿಗಳಿಂದ ಪತ್ರ​

author img

By

Published : Apr 12, 2023, 10:44 PM IST

ಶಿಗ್ಗಾಂವಿ ಕ್ಷೇತ್ರದ ಟಿಕೆಟ್​ ಅನ್ನು ಯಾಸೀರ್ ಖಾನ್ ಪಠಾಣ್‌ಗೆ ನೀಡಬೇಕೆಂದು ರಣದೀಪ್ ಸಿಂಗ್ ಸುರ್ಜೇವಾಲಾಗೆ ಜಿಲ್ಲೆಯ ಐವರು ಅಭ್ಯರ್ಥಿಗಳು ಪತ್ರ ಬರೆದಿದ್ದಾರೆ.

Etv Bharatletter-from-five-congress-candidates-to-surjewala
ಶಿಗ್ಗಾಂವಿಯ ಕಾಂಗ್ರೆಸ್​ ಟಿಕೆಟ್ ಮುಸ್ಲಿಮರಿಗೆ ಕೊಡಿ: ಹಾವೇರಿ ಜಿಲ್ಲೆ ಐವರು ಕೈ ಅಭ್ಯರ್ಥಿಗಳಿಂದ ಪತ್ರ​

ಹಾವೇರಿ: ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷವು ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಕ್ಷೇತ್ರವಾದ ಶಿಗ್ಗಾಂವಿ- ಸವಣೂರಿಗೆ ಕಾಂಗ್ರೆಸ್​ ಅಭ್ಯರ್ಥಿಯನ್ನು ಆಯ್ಕೆ ಮಾಡಿಲ್ಲ. ಶಿಗ್ಗಾಂವಿ ಕ್ಷೇತ್ರಕ್ಕೆ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಕೋರಿ ಜಿಲ್ಲೆಯ ಐವರು ಕಾಂಗ್ರೆಸ್​ ಅಭ್ಯರ್ಥಿಗಳು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾಗೆ ಪತ್ರ ಬರೆದಿದ್ದಾರೆ.

letter-from-five-congress-candidates-to-surjewala
ಐವರು ಅಭ್ಯರ್ಥಿಗಳು ಬರೆದ ಪತ್ರ

ಹಾವೇರಿ ಕ್ಷೇತ್ರದ ರುದ್ರಪ್ಪ ಲಮಾಣಿ, ಹಾನಗಲ್ ಕ್ಷೇತ್ರದ ಶ್ರೀನಿವಾಸ ಮಾನೆ, ಹಿರೇಕೆರೂರ ಕ್ಷೇತ್ರದ ಯು.ಬಿ.ಬಣಕಾರ, ಬ್ಯಾಡಗಿ ಕ್ಷೇತ್ರದ ಬಸವರಾಜ್ ಶಿವಣ್ಣನವರ್ ಹಾಗೂ ರಾಣೇಬೆನ್ನೂರ ಕ್ಷೇತ್ರದ ಪ್ರಕಾಶ್ ಕೋಳಿವಾಡ ಜಿಲ್ಲೆಯ ಪ್ರತಿ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ನಿರ್ಣಾಯಕ‌ ಪಾತ್ರ ವಹಿಸುವುದರಿಂದ ಶಿಗ್ಗಾಂವಿಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ: ಕಾಂಗ್ರೆಸ್​ ನಾಯಕರಿಂದ ಬಹಿರಂಗ ಬಂಡಾಯ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.