ETV Bharat / state

ಸದ್ಯಕ್ಕಿಲ್ಲ ಆರ್‌.ಶಂಕರ್‌ಗೆ ಸಚಿವ ಸ್ಥಾನ: ರಾಣೆಬೆನ್ನೂರು ಬಿಜೆಪಿ ಕಾರ್ಯಕರ್ತರಿಗೆ ಮತ್ತೆ ನಿರಾಸೆ

author img

By

Published : Dec 22, 2019, 7:54 PM IST

ರಾಣೆಬೆನ್ನೂರು ಅನರ್ಹ ಶಾಸಕ ಆರ್​.ಶಂಕರ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡುತ್ತೇವೆ ಎಂದು ಭರವಸೆ ನೀಡಿದ್ದ ಬಿಜೆಪಿ ನಾಯಕರು ಅವರಿಗೆ ಮತ್ತೊಂದು ಆಘಾತ​ ನೀಡಿದ್ದು, ವಿಧಾನ ಪರಿಷತ್​ ನಲ್ಲಿ ಖಾಲಿ ಉಳಿದಿದ್ದ ಒಂದು ಸ್ಥಾನಕ್ಕೆ ಡಿಸಿಎಂ ಲಕ್ಷಣ ಸವದಿಯವರನ್ನು ಆಯ್ಕೆ ಮಾಡಿದ್ದಾರೆ. ಇದರಿಂದಾಗಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಆರ್​.ಶಂಕರ್​ ಇನ್ನೂ ಆರು ತಿಂಗಳು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.

let down to R Shankar
ಆರ್​.ಶಂಕರ್, ಅನರ್ಹ ಶಾಸಕ

ರಾಣೆಬೆನ್ನೂರು: ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ್​ಗೆ ಸಚಿವ ಸ್ಥಾನ ಸಿಗಬೇಕೆಂದರೆ ಇನ್ನೂ ಅವರು 6 ತಿಂಗಳು ಕಾಯಬೇಕಾದ ಅನಿವಾರ್ಯತೆ ಎದುರಾಗಿದ್ದು, ಕಾರ್ಯಕರ್ತರಿಗೆ ನಿರಾಸೆ ಉಂಟು ಮಾಡಿದೆ.

ಆರ್​.ಶಂಕರ್, ಅನರ್ಹ ಶಾಸಕ

ದೊಸ್ತಿ ಸರ್ಕಾರದ ವಿರುದ್ಧ ಬಂಡಾಯವೆದ್ದು ಅನರ್ಹಗೊಂಡು ಬಳಿಕ ಕೇಸರಿ ಪಾಳಯ ಸೇರಿಕೊಂಡಿರುವ ಆರ್​. ಶಂಕರ್, ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್​ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಶಂಕರ್ ಆಸೆಗೆ ತಣ್ಣೀರೆರಚಿದ ಬಿಜೆಪಿ ನಾಯಕರು, ಅರುಣ ಕುಮಾರ ಪೂಜಾರಗೆ ಟಿಕೆಟ್​ ನೀಡಿದ್ದರು. ಈ ವೇಳೆ ಶಂಕರ್​ ಅವರನ್ನು ಎಂ​ಎಲ್​ಸಿ ಮಾಡಿ ಸಚಿವ ಸ್ಥಾನ ನೀಡುವುದಾಗಿ ಸಿಎಂ ಬಿಎಸ್​ವೈ ಸೇರಿದಂತೆ ಬಿಜೆಪಿ ನಾಯಕರು ಭರವಸೆ ನೀಡಿದ್ದರು.

ಎಂ​ಎಲ್​ಸಿಯಾಗಿ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಶಂಕರ್​ಗೆ ಬಿಜೆಪಿ ನಾಯಕರು ಮತ್ತೊಂದು ಶಾಕ್​ ಕೊಟ್ಟಿದ್ದು, ಶಿವಾಜಿನಗರ ಶಾಸಕ ರಿಜ್ವಾನ್​ ಅರ್ಷದ್ ಅವರಿಂದ ತೆರವಾದ ಪರಿಷತ್​ ಸ್ಥಾನಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ. ಇದರಿಂದ ಸದ್ಯಕ್ಕೆ ಎಲ್ಲಾ ಎಂಎಲ್​ಸಿ ಸ್ಥಾನಗಳೂ ಭರ್ತಿಯಾಗಿದ್ದು, ಶಂಕರ್​ಗೆ ಸಚಿವ ಸ್ಥಾನ ಸಿಗಬೇಕಾದರೆ ಇನ್ನೂ ಆರು ತಿಂಗಳು ಕಾಯಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಮೂಲಕ ತಮ್ಮ ನಾಯಕನಿಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಕಾಯುತ್ತಿದ್ದ ರಾಣೆಬೆನ್ನೂರು ಬಿಜೆಪಿ ಕಾರ್ಯಕರ್ತರಿಗೆ ನಿರಾಸೆ ಉಂಟಾಗಿದೆ.

Intro:
Kn_rnr_03_rshankar_minister_late_procees_kac10001.

ಇನ್ನು ಆರು ತಿಂಗಳಿಲ್ಲ ಆರ್.ಶಂಕರಗೆ ಅಧಿಕಾರ ಭಾಗ್ಯ.
ಕಾರ್ಯಕರ್ತರಕ್ಕೆ ದೊಡ್ಡ ಟೆನ್ಶ್ಯನ್.

ರಾಣೆಬೆನ್ನೂರ: ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರಗೆ ಇನ್ನು ಆರು ತಿಂಗಳು ಅಧಿಕಾರ ಭಾಗ್ಯ ಸಿಗುವುದಿಲ್ಲ ಎಂಬುದು ಖಚಿತವಾಗಿದ್ದು, ಕ್ಷೇತ್ರದ ಅವರ ಕಾರ್ಯಕರ್ತರಿಗೆ ದೊಡ್ಡ ತೆಲೆ ನೋವಾಗಿ ಪರಿಣಮಿಸಿದೆ.

Body:ಹೌದು ಬಿಜೆಪಿ ಸರ್ಕಾರಕ್ಕಾಗಿ ಪಕ್ಷಾಂತರ ಮಾಡಿದ್ದ ಶಂಕರಗೆ ಅಂದಿನ ಸ್ಪೀಕರ್ ಕೆ.ಆರ್.ರಮೇಶಕುಮಾರ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರು. ನಂತರ ಸುಪ್ರೀಂಕೋರ್ಟ್ ಸಹ ಶಂಕರನ್ನು ಅನರ್ಹ ಶಾಸಕರಾಗಿ ಉಳಿಸಿತು. ನಂತರ ಚುನಾವಣಾ ಆಯೋಗ ರಾಣೆಬೆನ್ನೂರ ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸಿದ್ದರಿಂದ ಆರ್.ಶಂಕರಗೆ ದೊಡ್ಡ ತೆಲೆನೋವಾಗಿ ಪರಿಣಮಿಸಿತು.
ನಂತರ ರಾಜಕೀಯ ಬೆಳವಣಿಗೆಯಲ್ಲಿ ಆರ್.ಶಂಕರಗೆ ಬಿಜೆಪಿ ಟಿಕೆಟ್ ನೀಡದೆ, ಅವರನ್ನು ಸಿಎಂ ಯಡಿಯೂರಪ್ಪ ಎಂಎಲ್ಸಿ ಮಾಡಿ ಸಚಿವರಾಗಿ ಮಾಡುತ್ತೆನೆ ಎಂದು ಭರವಸೆ ನೀಡಿದ್ದರು.

ಈಗ ಆರ್.ಶಂಕರ ಸಚಿವ ಸ್ಥಾನ ನೀಡಬೇಕಾದರೆ ಅವರನ್ನು ಎಂಎಲ್ಸಿ ಮಾಡಬೇಕಾಗಿದೆ. ಆದರೆ ಶಿವಾಜಿ ನಗರ ಶಾಸಕ ರಿಜ್ವಾನ ಅರ್ಷದ ಅವರಿಂದ ತೆರವಾದ ಎಂಎಲ್ಸಿ ಮೇಲೆ ಕಣ್ಣಿಟ್ಟಿದ ಆರ್.ಶಂಕರಗೆ ಮತ್ತೆ ಬಿಜೆಪಿ ಶಾಖ್ ನೀಡಿದೆ.
ಸದ್ಯ ಡಿಸಿಎಂ ಲಕ್ಷ್ಮಣ ಸವದಿಗೆ ಎಂಎಲ್ಸಿ ಸ್ಥಾನ ನೀಡಿ ಅವರನ್ನು ಡಿಸಿಎಂ ಸ್ಥಾನದಿಂದ ಮುಂದುವರೆಯುವಂತೆ ಬಿಜೆಪಿ ಪ್ಲಾನ್ ಮಾಡಿದೆ.
Conclusion:ಈಗ ಯಾವುದೇ ಎಂಎಲ್ಸಿ ಸ್ಥಾನಗಳ ಖಾಲಿ ಇಲ್ಲದರಿಂದ ಆರ್.ಶಂಕರ ಸಚಿವ ಸ್ಥಾನ ಅಲಂಕಾರ ಮಾಡಬೇಕಾದ್ರೆ ಇನ್ನು ಆರು ತಿಂಗಳು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.
ಇದರಿಂದ ರಾಣೆಬೆನ್ನೂರಿನ ಶಂಕರ ಕಾರ್ಯಕರ್ತರಿಗೆ ಅಧಿಕಾರದ ದೊಡ್ಡ ಟೆನ್ಶ್ಯನ ಶುರುವಾಗಿದೆ ಎನ್ನಲಾಗಿದೆ.

(ಹಳೆ ವಿಡಿಯೋ ಬಳಸಿಕೊಳ್ಳಲು ವಿನಂತಿ)
ETV Bharat Logo

Copyright © 2024 Ushodaya Enterprises Pvt. Ltd., All Rights Reserved.