ಹಾವೇರಿ : ಲಾಕ್ಡೌನ್ ನಿಂದಾಗಿ ಬಡ ಕೂಲಿ ಕಾರ್ಮಿಕರು ಸಣ್ಣ ಸಣ್ಣ ವೃತ್ತಿಗಳನ್ನ ಅವಲಂಭಿಸಿದ ಕುಟುಂಬಗಳು ಜೊತೆಗೆ ಕ್ಷೌರಿಕ ವೃತಿ ಅವಲಂಬಿಸಿಕೊಂಡಿದ್ದ ಸವಿತಾ ಸಮಾಜ ಕೂಡ ಸಂಕಷ್ಟಕ್ಕೆ ಸಿಲುಕಿವೆ.
ಜಿಲ್ಲೆಯ ನೂರಾರು ಕುಟುಂಬಗಳು ಕ್ಷೌರಿಕ ವೃತ್ತಿಯನ್ನು ಜೀವನಾಧಾರ ಮಾಡಿಕೊಂಡಿವೆ. ಆದರೆ ಲಾಕ್ಡೌನ್ನಿಂದಾಗಿ ಸೆಲೋನ್ಗಳು ಆರಂಭವಾಗಿಲ್ಲ. ದಿನನಿತ್ಯದ ದುಡಿಮೆಯಿಂದ ಜೀವನ ಸಾಗಿಸುವ ಈ ಕುಟುಂಬಗಳು ಇದೀಗ ಸಂಕಷ್ಟಕ್ಕೆ ಸಿಲುಕಿವೆ.
ಜಿಲ್ಲೆಯಲ್ಲಿ ಸವಿತಾ ಸಮಾಜ ಮತ್ತು ಹಡಪದ ಅಪ್ಪಣ ಸಮಾಜದ ಸುಮಾರು ಐದು ನೂರಕ್ಕೂ ಅಧಿಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರ ಸಂಬಂಧಪಟ್ಟ ಇಲಾಖೆ ಸಂಘ ಸಂಸ್ಥೆಗಳು ಈ ಕುಟುಂಬಗಳ ನೋವಿಗೆ ಸ್ಪಂಧಿಸಬೇಕು ಎಂಬುದು ಜನರ ಅಭಿಪ್ರಾಯವಾಗಿದೆ.