ಹಾವೇರಿ : ಮಹಿಳಾ ಲ್ಯಾಬ್ ಟೆಕ್ನಿಷಿಯನ್‌ವೊಬ್ಬರು ಗುಂಡಿಗೆ ಇಳಿದು ಹೂಳಲು ಇರಿಸಿದ್ದ ಮೃತದೇಹದ ಸ್ವ್ಯಾಬ್ ಕಲೆಕ್ಟ್ ಮಾಡಿದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹಿರೇಮುಗದೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವ್ಯಕ್ತಿಯೊಬ್ಬರು ಮೇ 10,2020ರಂದು ಮೃತಪಟ್ಟಿದ್ರು. ಸ್ವ್ಯಾಬ್ ಕಲೆಕ್ಟ್ ಮಾಡಲು ಸವಣೂರು ತಾಲೂಕು ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡ್ತಿರೋ ಲ್ಯಾಬ್ ಟೆಕ್ನಿಷಿಯನ್ ಶೋಭಾ ಸವಣೂರು ಗ್ರಾಮಕ್ಕೆ ಹೋಗುವಷ್ಟರಲ್ಲಿ ಮೃತದೇಹವನ್ನ ಅಂತ್ಯಕ್ರಿಯೆ ಮಾಡಲು ಗುಂಡಿಯಲ್ಲಿ ಇರಿಸಲಾಗಿತ್ತು. ಹೀಗಾಗಿ, ಪಿಪಿಇ ಕಿಟ್ ಧರಿಸಿ ಭಯದಿಂದಲೇ ಹೆಣವಿದ್ದ ಗುಂಡಿಗೆ ಇಳಿದು ಶೋಭಾ ಮೃತದೇಹದ ಸ್ವ್ಯಾಬ್ ಕಲೆಕ್ಟ್ ಮಾಡಿದ್ದಾರೆ.
![lab technician collected swab in deadbody](https://etvbharatimages.akamaized.net/etvbharat/prod-images/kn-hvr-01-death-squab-7202143_12052020101141_1205f_1589258501_681.jpg)
ಸವಣೂರು ಪಟ್ಟಣದ ಇಬ್ಬರಲ್ಲಿ ಕೊರೊನಾ ಕೇಸ್ ದೃಢಪಟ್ಟಿದ್ದರಿಂದ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಲಾಗಿತ್ತು. ಹೀಗಾಗಿ ಲ್ಯಾಬ್ ಟೆಕ್ನಿಷಿಯನ್ ಗಳೇ ಸ್ಮಶಾನಕ್ಕೆ ತೆರಳಿ ಮೃತದೇಹದ ಸ್ವ್ಯಾಬ್ ಕಲೆಕ್ಟ್ ಮಾಡೋ ಪರಿಸ್ಥಿತಿ ನಿರ್ಮಾಣ ಆಗಿದೆ. ಆದರೆ, ತಾಲೂಕಿನ ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೃತನ ಸ್ವ್ಯಾಬ್ ಕಲೆಕ್ಟ್ ಮಾಡಲು ಕಳಿಸೋದು ತಡವಾಗಿದ್ದರಿಂದ ಸ್ಮಶಾನಕ್ಕೆ ಹೊಗಿ ಸ್ವ್ಯಾಬ್ ಕಲೆಕ್ಟ್ ಮಾಡುವಂತಾಗಿದೆ. ಇದು ಅಧಿಕಾರಿಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯತನಕ್ಕೆ ಸಾಕ್ಷಿಯಾಗಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ.