ಹಾವೇರಿ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಳ್ಳೆಯ ಭವಿಷ್ಯಕಾರರು ಎಂದು ಕೂಡಲ ಸಂಗಮ ಪಂಚಮಸಾಲಿ ಮಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಶಿಗ್ಗಾವಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರಿಗೆ ರಾಜ್ಯದ ಮುಂದಿನ ವಿದ್ಯಮಾನಗಳ ಅರಿಯುವ ಶಕ್ತಿಯಿದೆ. ನನ್ನ ಪಾದಯಾತ್ರೆ ಸಂದರ್ಭದಲ್ಲಿ ರಾಜ್ಯದಲ್ಲಿ ಧರ್ಮಕಾರಣ, ರಾಜಕಾರಣದ ಕುರಿತಂತೆ ಹೇಳಿದ್ದರು, ಅವರು ಹೇಳಿದಂತೆ ಆಯಿತು ಎಂದರು.
ಓದಿ : ಸಿಎಂ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಅನಿವಾರ್ಯ: ಯತ್ನಾಳ್
ಯತ್ನಾಳ್ ಅವರು ಭವಿಷ್ಯ ನುಡಿದಂತೆ ಅವರೇ ಮುಂದಿನ ಮುಖ್ಯಮಂತ್ರಿಯಾಗಬಹುದು. ಸಿಎಂ ಯಡಿಯೂರಪ್ಪ ವಯಸ್ಸಿನ ಕಾರಣದಿಂದ ಸಿಎಂ ಸ್ಥಾನ ಬಿಟ್ಟರೆ, ಬಿಜೆಪಿ ಮುಂದಿನ ಸಿಎಂ ಬಗ್ಗೆ ಸಲಹೆ ಕೇಳಿದರೆ ಯತ್ನಾಳ್ ಹೆಸರು ಹೇಳುತ್ತೇನೆ.
ಉತ್ತರ ಕರ್ನಾಟಕದ ಪಂಚಮಸಾಲಿ ಶಾಸಕರಿಗೆ ಮೊದಲ ಆಧ್ಯತೆ ನೀಡುತ್ತೇನೆ ಎಂದು ತಿಳಿಸಿದರು. ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ನಡ್ಡಾರಿಗೆ ಮುಂದಿನ ಸಿಎಂ ಆಗುವವರ ಅರ್ಹತೆ ಗೊತ್ತಿದೆ. ಹಾಗಾಗಿ, ಯತ್ನಾಳ್ ಮುಂದಿನ ಸಿಎಂ ಆಗಬಹುದು ಎಂದರು.