ರಾಣೆಬೆನ್ನೂರು : ಹಳ್ಳಿಗಳಲ್ಲಿ ಕೊಳಚೆ ನೀರು ನದಿ ಹಾಗೂ ಜಲ ಮೂಲಗಳಿಗೆ ಸೇರುವ ಮುನ್ನ ಸಂಸ್ಕರಿಸಿ ಹರಿಸುವ ವಿನೂತನ ಗ್ರೀನ್ ವಾಟರ್ (ಬೂದು ನೀರು) ನಿರ್ವಹಣಾ ವ್ಯವಸ್ಥೆಯನ್ನು ರಾಜ್ಯದಲ್ಲೇ ಪ್ರಪ್ರಥಮವಾಗಿ ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮ ಪಂಚಾಯತ್ ಅನುಷ್ಠಾನ ಮಾಡಿದೆ.
ಓದಿ: ಆ್ಯಂಬುಲೆನ್ಸ್ನಿಂದ ಜಿಗಿದು ಕತ್ತು ಕೊಯ್ದುಕೊಂಡ ಮಾನಸಿಕ ಅಸ್ವಸ್ಥ - ಚಿಕಿತ್ಸೆ ಫಲಿಸದೇ ಸಾವು
ರಾಣೆಬೆನ್ನೂರು ತಾಲೂಕಿನ ಕುಮಾರಪಟ್ಟಣಂ ಸಮೀಪದ ಕೋಡಿಯಾಲ ಹೊಸಪೇಟೆ ಹಾಗೂ ಬ್ಯಾಡಗಿ ಮತ ಕ್ಷೇತ್ರ ವ್ಯಾಪ್ತಿಯ ಬೆನಕಕೊಂಡ ಗ್ರಾಮದಲ್ಲಿ ಈ ಯೋಜನೆಯನ್ನ ಮಾಡಲಾಗಿದೆ. ಕೋಡಿಯಾಲ ಗ್ರಾಮ ಪಂಚಾಯತ್ ವಿಶೇಷ ಕಾಳಜಿ ಮೂಲಕ ನರೇಗಾ ಹಾಗೂ ಎಸ್ಬಿಎಂ ಯೋಜನೆ ಅಡಿಯಲ್ಲಿ ಸುಮಾರು 1 ಕೋಟಿ 30 ಲಕ್ಷ ರೂ. ವೆಚ್ಚದಲ್ಲಿ ಒಟ್ಟು ಐದು ಯುನಿಟ್ಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗಿದೆ. ಈಗಾಗಲೇ ಒಂದು ಯುನಿಟ್ ಸ್ಥಾಪನೆ ಮಾಡಲಾಗಿದ್ದು, ಕೊಳಚೆ ನೀರು ಈ ಯುನಿಟ್ ಮೂಲಕ ಸಂಸ್ಕರಣೆಯಾಗಿ ತುಂಗಭದ್ರಾ ನದಿಗೆ ಸೇರುತ್ತಿದೆ.
ಈ ಒಂದು ವಿನೂತನ ಯೋಜನೆ ಗ್ರಾಮ ಪಂಚಾಯತ್ ಮಾಡಿದ ಹಿನ್ನೆಲೆ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್ ಕೆ ಅತೀಕ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ವಿಶೇಷ.
ಬೂದ ನೀರು ನಿರ್ವಹಣೆ ಘಟಕ ಕೆಲಸವೇನು?
ಗ್ರಾಮಗಳಲ್ಲಿ ಪಾತ್ರೆ ತೊಳದೆ ನೀರು, ಬಟ್ಟೆ ತೊಳೆದ ನೀರು, ಬಚ್ಚಲು ನೀರು ಸೇರಿದಂತೆ ಕಲುಷಿತ ನೀರು ಮುಂಚೆ ಚರಂಡಿಗಳಲ್ಲಿ ಹರಿದು ನದಿಗೆ ಸೇರುತಿತ್ತು. ಆದರೆ, ಸಿಮೆಂಟ್‌ನಿಂದ ನಿರ್ಮಾಣ ಮಾಡಿದ ಕಾಲುವೆಗಳಲ್ಲಿ ನೀರು ಹರಿದು ಈ ಕಾಲುವೆಗೆ ಸಂಪರ್ಕ ಹೊಂದಿದಂತೆ, ಕೆಳಹಂತದಲ್ಲಿ ಕಲ್ಲಿನಿಂದ ನಿರ್ಮಾಣ ಮಾಡಿದ ಚರಂಡಿ ಮೂಲಕ ಹರಿದು ಸಂಸ್ಕರಣಕ್ಕಾಗಿ ನಿರ್ಮಾಣ ಮಾಡಿರುವ ದೊಡ್ಡ ಕಲ್ಲು ತೊಟ್ಟಿಗಳಲ್ಲಿ ಸೇರಿ ಸಂಸ್ಕರಣಗೊಳ್ಳುತ್ತದೆ.
ನಂತರ ಈ ತೊಟ್ಟಿಯಿಂದ ನದಿಗೆ ಹರಿಸಲು ಕಲ್ಲಿನಿಂದಲೇ ಕಾಲುವೆಗಳನ್ನು ನಿರ್ಮಾಣಮಾಡಲಾಗಿದೆ. ನದಿಗೆ ಕಲುಷಿತ ನೀರು ಸೇರುವ ಮುನ್ನವೇ ತ್ಯಾಜ್ಯವನ್ನು ವೈಜ್ಞಾನಿಕ ಮತ್ತು ತಾಂತ್ರಿಕ ಮಾದರಿಯಲ್ಲಿ ಸಂಸ್ಕರಿತ ನೀರು ನದಿ ಸೇರುತ್ತದೆ. ಜಲಮೂಲಗಳಿಗೆ ಸೇರುವಂತೆ ಯೋಜನೆಯನ್ನು ವಿನ್ಯಾಸ ಮಾಡಲಾಗಿದೆ.