ETV Bharat / state

ಫೆ.26 ರಿಂದ ಹಾವೇರಿಯಲ್ಲಿ 3 ದಿನ ಕನ್ನಡ ಸಾಹಿತ್ಯ ಸಮ್ಮೇಳನ; ಸಚಿವ ಬೊಮ್ಮಾಯಿ ನೇತೃತ್ವದಲ್ಲಿ ಪೂರ್ವ ಸಿದ್ಧತಾ ಸಭೆ - ಹಾವೇರಿ ಜಿಲ್ಲೆ

ಹಾವೇರಿಯಲ್ಲಿ ಮುಂದಿನ ವರ್ಷ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಫೆಬ್ರವರಿ 26, 27 ಮತ್ತು 28ರಂದು ನಡೆಯಲಿರುವ ಸಮ್ಮೇಳನದ ಪೂರ್ವ ಸಿದ್ಧತೆ ಕುರಿತು ಜಿಲ್ಲಾ ಉಸ್ತುವಾರಿಯೂ ಆಗಿರುವ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆ ನಡೆಯಿತು.

Kasapa and Haveri district incharge minister meeting on Kannada Sahitya sammelana 2021
ಫೆ.26 ರಿಂದ ಹಾವೇರಿಯಲ್ಲಿ 3 ದಿನ ಕನ್ನಡ ಸಾಹಿತ್ಯ ಸಮ್ಮೇಳನ; ಸಚಿವ ಬೊಮ್ಮಾಯಿ ನೇತೃತ್ವದಲ್ಲಿ ಪೂರ್ವ ಸಿದ್ಧತಾ ಸಭೆ
author img

By

Published : Dec 19, 2020, 4:45 AM IST

ಹಾವೇರಿ: 2021ರ ಫೆಬ್ರವರಿ 26, 27 ಮತ್ತು 28ರಂದು ನಡೆಸಲು ಉದ್ದೇಶಿಸಿರುವ 3 ದಿನಗಳ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ಧತೆ ಕುರಿತು ನಗರದಲ್ಲಿಂದು ಚರ್ಚೆ ನಡೆಯಿತು.

ಫೆ.26 ರಿಂದ ಹಾವೇರಿಯಲ್ಲಿ 3 ದಿನ ಕನ್ನಡ ಸಾಹಿತ್ಯ ಸಮ್ಮೇಳನ; ಸಚಿವ ಬೊಮ್ಮಾಯಿ ನೇತೃತ್ವದಲ್ಲಿ ಪೂರ್ವ ಸಿದ್ಧತಾ ಸಭೆ

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕರೆದಿದ್ದ ಸಭೆಯಲ್ಲಿ ಹಾವೇರಿ ನಗರದಲ್ಲಿ ಮೂರು ದಿನಗಳ ಕಾಲ ನಡೆಸಲು ಉದ್ದೇಶಿಸಿರುವ ಸಾಹಿತ್ಯ ಸಮ್ಮೇಳನದ ಸಿದ್ಧತಾ ಕಾರ್ಯಗಳ ಕುರಿತು ಮಾತುಕತೆ ನಡೆಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮ್ಮೇಳನದ ಯಶಸ್ಸಿಗೆ ಈಗಿನಿಂದಲೆ ತಯಾರಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಯ್ತು.

ಎಲ್ಲಾ ಸಮ್ಮೇಳನಗಳಂತೆ ಈ ಸಮ್ಮೇಳನವೂ ಆಗದೆ ಇದೊಂದು ಮಾದರಿ ಸಮ್ಮೇಳನ ಮಾಡಲು ಶ್ರಮಿಸುವಂತೆ ಸಭೆಯಲ್ಲಿ ಅಧಿಕಾರಿಗಳು ಹಾಗೂ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದ್ರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ ಸಹ ಸಮ್ಮೇಳನಕ್ಕೆ ಈಗಿನಿಂದಲೆ ಸಿದ್ಧತಾ ಕಾರ್ಯಗಳನ್ನ ನಡೆಸುವ ಬಗ್ಗೆ ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.