ETV Bharat / state

ಹಾವೇರಿ: ಅದ್ಧೂರಿಯಾಗಿ ನೆರವೇರಿದ ಕಾರಹುಣ್ಣಿಮೆ

ಕಾರಹುಣ್ಣಿಮೆ ಸಂದರ್ಭದಲ್ಲಿ ಹಾವೇರಿಯ ಕರ್ಜಿಗಿ ಗ್ರಾಮದಲ್ಲಿ ಭರಮಲಿಂಗೇಶ್ವರ ಜಾತ್ರಾ ಮಹೋತ್ಸವ ವಿಜೃಭಣೆಯಿಂದ ನೆರವೇರಿತು. ಮೂರು ದಿನ ನಡೆಯುವ ಈ ಜಾತ್ರೆ ಪೇಶ್ವೆಗಳ ಕಾಲದಿಂದಲೂ ನಡೆದುಕೊಂಡು ಬಂದಿರುವುದು ವಿಶೇಷ.

kara hunnime
ಹಾವೇರಿ ಅದ್ಧೂರಿಯಾಗಿ ನೆರವೇರಿದ ಕಾರಹುಣ್ಣಿಮೆ
author img

By

Published : Jun 22, 2022, 10:48 PM IST

ಹಾವೇರಿ: ತಾಲೂಕಿನ ಕರ್ಜಿಗಿಯಲ್ಲಿ ಕಾರಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹುಣ್ಣಿಮೆಯಂದು ಪೇಶ್ವೆಯ ಕಾಲದಿಂದಲೂ ವಿಭಿನ್ನವಾಗಿ ಮೂರು ದಿನಗಳ ಕಾಲ ಗ್ರಾಮದ ಆರಾಧ್ಯದೈವ ಭರಮಲಿಂಗೇಶ್ವರ ಜಾತ್ರಾ ಮಹೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಮೊದಲ ದಿನ ಮಂಗಳವಾರದಂದು ಹೊನ್ನುಗ್ಗಿ, ಎರಡನೇ ದಿನ ಬಂಡಿ ಓಡಿಸುವ ಸಂಪ್ರದಾಯ ಹಾಗೆಯೇ ಮೂರನೇ ದಿನ ಕರಕ್ಕಿಬಂಡಿ ಎಂಬ ಆಚರಣೆ ನಡೆಯುತ್ತದೆ. ಗ್ರಾಮದಲ್ಲಿರುವ 54 ಬಾಬುದಾರರು (ಜಾತಿಯವರು) ಇದರಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ.

ಗ್ರಾಮದಿಂದ ಹೆಣ್ಣು ಕೊಡಬೇಕಾದರೂ ಈ ದಿನ ಅಳಿಯನನ್ನು ಗ್ರಾಮಕ್ಕೆ ಕರೆಸಲಾಗುತ್ತದೆ. ಮದುವೆಗೆ ಆಯ್ಕೆಯಾದ ಸೊಸೆಯನ್ನೂ ಕರಿಸಲಾಗುತ್ತದೆ. ಈ ದಿನ ಗ್ರಾಮದಲ್ಲಿ ಯಾವುದೇ ಅನಾಹುತಗಳು ನಡೆಯುವಂತಿಲ್ಲ. ಒಂದು ವೇಳೆ ನಡೆದರೂ ಅದು ಭರಮಲಿಂಗೇಶ್ವರನ ಆಶೀರ್ವಾದ ಎಂದೇ ನಂಬಲಾಗುತ್ತದೆ.

ಕಳೆದೆರಡು ವರ್ಷ ಕೋವಿಡ್​ ಕಾರಣದಿಂದ ಕಾರಹುಣ್ಣಿಮೆ ಆಚರಿಸಲಾಗಿಲ್ಲ. ಈ ವರ್ಷ ಅಧಿಕ ಸಂಖ್ಯೆಯಲ್ಲಿ ಭಕ್ತರು ಸೇರಿ ವಿಜೃಂಭಣೆಯಿಂದ ಜಾತ್ರೆಯನ್ನು ಆಚರಿಸುತ್ತಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿನ್ನೂ ಓಮಿಕ್ರಾನ್​​ ತಳಿಗಳು ಪ್ರಾಬಲ್ಯ ಹೊಂದಿವೆ: ಸಚಿವ ಸುಧಾಕರ್​ ಟ್ವೀಟ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.