ETV Bharat / state

ಕುರುಬರು ಒಗ್ಗಟ್ಟಾಗಿ ಹೆಜ್ಜೆ ಹಾಕಿದರೆ ಎಸ್​ಟಿ ಸಿಕ್ಕಿತಲೇ ಪರಾಕ್: ಕಾಗಿನೆಲೆ ಶ್ರೀ ನುಡಿ

ಬೆಂಗಳೂರಲ್ಲಿ ಫೆಬ್ರುವರಿ 7ರಂದು ನಡೆಯುವ ಸಮಾವೇಶದಲ್ಲಿ 10 ಲಕ್ಷ ಕುರುಬರು ಸೇರುತ್ತಾರೆ. ಕೇಂದ್ರ ಸರ್ಕಾರ ನಮ್ಮ ಕಡೆ ತಿರುಗಿ ನೋಡಿ ಕುರುಬ ಸಮುದಾಯಕ್ಕೆ ಎಸ್​​ಟಿ ಮೀಸಲಾತಿ ನೀಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Kanakapitta kaginele sri
ಕನಕಗುರುಪೀಠದ ಕಾಗಿನೆಲೆ ಶ್ರೀ
author img

By

Published : Jan 15, 2021, 10:10 PM IST

ಹಾವೇರಿ: ಕರ್ನಾಟಕದ ಕುರುಬರು ಒಗ್ಗಟ್ಟಾಗಿ ಹೆಜ್ಜೆ ಹಾಕಿದರೇ ಎಸ್​ಟಿ ಸಿಕ್ಕಿತಲೇ ಪರಾಕ್ ಎಂದು ಕಾಗಿನೆಲೆ ಶ್ರೀಗಳು ಕಾರ್ಣಿಕ ನುಡಿದಿದ್ದಾರೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ಎಸ್​​ಟಿ ಹೋರಾಟ ಪಾದಯಾತ್ರೆಯ ಉದ್ಘಾಟಿಸಿ ಮಾತನಾಡಿದರು.

ಕಳೆದ ಹಲವು ವರ್ಷಗಳಿಂದ ಮೈಲಾರದ ಗೊರವಪ್ಪ ಕಾರ್ಣಿಕ ನುಡಿದ ಸಂಗತಿ ನಿಜವಾಗಿದೆ. ಅದರಂತೆ ಕನಕಗುರುಪೀಠದ ಕಾಗಿನೆಲೆ ಶ್ರೀಗಳು ಕಾರ್ಣಿಕ ನುಡಿಯುತ್ತಿದ್ದು ಇದು ನಿಜವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುರುಬ ಜನಾಂಗಕ್ಕೆ ಎಸ್​ಟಿ ಮೀಸಲಾತಿಗೆ ಆಗ್ರಹಿಸಿದ ಕಾಗಿನೆಲೆ ಶ್ರೀ

ಬೆಂಗಳೂರಲ್ಲಿ ಫೆಬ್ರುವರಿ 7ರಂದು ನಡೆಯುವ ಸಮಾವೇಶದಲ್ಲಿ 10 ಲಕ್ಷ ಕುರುಬರು ಸೇರುತ್ತಾರೆ. ಕೇಂದ್ರ ಸರ್ಕಾರ ನಮ್ಮ ಕಡೆ ತಿರುಗಿ ನೋಡಿ ಕುರುಬ ಸಮುದಾಯಕ್ಕೆ ಎಸ್​​ಟಿ ಮೀಸಲಾತಿ ನೀಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕುರಿಗಳು ಸರಿಯಾಗಿ ನಡೆಯುತ್ತಿರುತ್ತವೆ. ಆದರೆ ಅವುಗಳ ದಾರಿಯನ್ನು ಮೇಕೆಗಳು ತಪ್ಪಿಸುತ್ತವೆ. ಆದರೆ ಈ ಬಾರಿ ಆ ರೀತಿಯಾಗಲು ಬಿಡುವುದಿಲ್ಲ. ಕುರಿಗಳ ಹಿಂಡಿಗೆ ಮುಂದೆ ನಾನಿದ್ದು, ಹಿಂದೆ ಈಶ್ವರಾನಂದ ಪುರಿಶ್ರೀಗಳು ಇರುತ್ತಾರೆ. ಹೀಗಾಗಿ ಕುರಿಗಳು ದಾರಿ ತಪ್ಪುವುದಿಲ್ಲ. ಎಸ್​​ಟಿ ಹೋರಾಟದಲ್ಲಿ ಯಶಸ್ಸು ತಮಗೆ ಸಿಕ್ಕೇ ಸಿಗುತ್ತೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಇದನ್ನೂ ಓದಿ: ಕುರುಬ ಸಮುದಾಯಕ್ಕೆ ಎಸ್​ಟಿ ಮೀಸಲಾತಿಗಾಗಿ ಕಾಗಿನೆಲೆ ಶ್ರೀ ಪಾದಯಾತ್ರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.