ಹಾನಗಲ್: ತಾಲೂಕಿನಲ್ಲಿರುವ ಜಾರ್ಖಂಡ್ ಕಾರ್ಮಿಕರು ತಮ್ಮ ರಾಜ್ಯಕ್ಕೆ ತೆರಳಲು ಮೇ 19ರಂದು ಹುಬ್ಬಳ್ಳಿಯಿಂದ ರೈಲು ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹಾನಗಲ್ ತಹಶೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ತಿಳಿಸಿದರು.
ಈಗಾಗಲೆ ಜಾರ್ಖಂಡ್ ರಾಜ್ಯದ ಕಾರ್ಮಿಕರು ತಮ್ಮ ಊರಿಗೆ ತಲುಪಲು ಇಚ್ಛಿಸುವರು ಇನ್ನು ಎರಡು, ಮೂರು ದಿನಗಳಲ್ಲಿ ಆಸ್ಪತ್ರೆ ಅಥವಾ ತಾಲೂಕು ಆಡಳಿತಕ್ಕೆ ಭೇಟಿ ನೀಡಿ ತಮ್ಮ ವಿವರ ನೀಡಬೇಕು ಎಂದು ಅವರು ತಿಳಿಸಿದರು. ಜಾರ್ಖಂಡ್ ರಾಜ್ಯಕ್ಕೆ ಸಂಬಂಧಪಟ್ಟ ಕಾರ್ಮಿಕರಿಗೆ ಈ ಅವಕಾಶವಿದೆ. ತಮ್ಮ ರಾಜ್ಯಕ್ಕೆ ತೆರಳುವ ಆಸಕ್ತಿ ಇದ್ದವರು ತಮ್ಮ ವಿವರವನ್ನ ನೀಡಿ ಎಂದು ತಿಳಿಸಿದರು.