ಹಾವೇರಿ: ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಸಿಎಂ ಅಭ್ಯರ್ಥಿ ಎಂದರೆ ಡಿಕೆಶಿ ಕಾಂಗ್ರೆಸ್ಸ್‌ನಲ್ಲಿರುವುದಿಲ್ಲಾ. ಡಿಕೆಶಿ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದರೇ ಕಾಂಗ್ರೆಸ್ನಿಂದ ಸಿದ್ದರಾಮಯ್ಯ ಹೊರಬರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಬಸವರಾಜ ಹೊರಟ್ಟಿ ಈಗಾಗಲೇ 7 ಬಾರಿ ವಿಧಾನ ಪರಿಷತ್ಗೆ ಆಯ್ಕೆಯಾಗಿ ದಾಖಲೆ ಮಾಡಿದ್ದಾರೆ. ಹೊರಟ್ಟಿ ಪ್ರತಿನಿಧಿಸುವ ಬಹುತೇಕ ಕ್ಷೇತ್ರಗಳ ಶಾಸಕರು ಮತ್ತು ಸಂಸದರಿದ್ದಾರೆ. ಹೀಗಾಗಿ ಬಸವರಾಜ್ ಹೊರಟ್ಟಿ 8 ನೇ ಬಾರಿ ವಿಧಾನಪರಿಷತ್‌ಗೆ ಆಯ್ಕೆಯಾಗುವುದರಲ್ಲಿ ಸಂಶಯವಿಲ್ಲಾ ಎಂದು ಶೆಟ್ಟರ್ ತಿಳಿಸಿದರು.
ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಹೊರಟ್ಟಿ ಮತ್ತು ಬಿಜೆಪಿ ನಡುವೆ ಪೈಪೋಟಿ ನಡೆಯುತ್ತಿತ್ತು. ಆದರೆ ಈ ಬಾರಿ ಹೊರಟ್ಟಿ ಬಿಜೆಪಿ ಜೊತೆ ಸೇರಿದ್ದಾರೆ. ಹೀಗಾಗಿ ಶಿಕ್ಷಕರ ಕ್ಷೇತ್ರದಲ್ಲಿ ಅತಿಹೆಚ್ಚು ಪ್ರಾಶಸ್ತ್ಯ ಮತಗಳ ಮೂಲಕ ಹೊರಟ್ಟಿ ಪರಿಷತ್ ಪ್ರವೇಶ ಮಾಡಲಿದ್ದಾರೆ ಎಂದು ಶೆಟ್ಟರ್ ಭವಿಷ್ಯ ನುಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ, ಕಾಂಗ್ರೆಸ್‌ಗೆ ಶಿಕ್ಷಕರ ಸಮಸ್ಯೆ ಬಗ್ಗೆ ನಯಾಪೈಸೆಯಷ್ಟು ಗೊತ್ತಿಲ್ಲ. ಅವರ ಟೀಕೆಯನ್ನು ನಾನು ಗಂಭೀರವಾಗಿ ತಗೆದುಕೊಳ್ಳುವುದಿಲ್ಲಾ ಎಂದರು.
ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಈ ಹಿಂದೆ ಆರಿಸಿ ಬಂದಿಲ್ಲಾ ಈ ಬಾರಿ ಸಹ ಆರಿಸಿ ಬರುವದಿಲ್ಲ. ಶಿಕ್ಷಕರ ಜೊತೆ ಚರ್ಚಿಸಿ ಬಿಜೆಪಿ ಸೇರಿದ್ದೇನೆ, ಶಿಕ್ಷಕರು ನನ್ನನ್ನು ಕೈಬೀಡುವುದಿಲ್ಲಾ. ಎಂಟನೇ ಹಾರಿ ವಿಧಾನಪರಿಷತ್ ಪ್ರವೇಶಿಸುವುದರಲ್ಲಿ ಸಂಶಯವಿಲ್ಲಾ ಎಂದು ಹೊರಟ್ಟಿ ತಿಳಿಸಿದರು.
ಇದನ್ನೂ ಓದಿ: ನನ್ನ ಪ್ರಶ್ನೆಗೆ ಉತ್ತರಿಸಲಾಗದ ಆರ್ಎಸ್ಎಸ್ ಬಿಜೆಪಿಗರನ್ನು ಛೂ ಬಿಟ್ಟಿದೆ: ಸಿದ್ದರಾಮಯ್ಯ