ಹಾವೇರಿ: ಜಿಲ್ಲಾದ್ಯಂತ ಗುರುವಾರ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು.
ಕೊರೊನಾ ಸೋಂಕಿನಿಂದಾಗಿ ಸಂಘಟಿತ, ಅಸಂಘಟಿತ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆ ಸರಳವಾಗಿ ಕಾರ್ಮಿಕ ದಿನಾಚರಣೆ ನಡೆಯಿತು. ನಗರದ ಹೆಸ್ಕಾಂ ಸಭಾಭವನದ ಬಳಿ ಇರುವ ಕಾರ್ಮಿಕ ಸ್ಮಾರಕಕ್ಕೆ ಕಾರ್ಮಿಕ ದಿನದ ನಿಮಿತ್ತ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.
ಸಾಮಾಜಿಕ ಅಂತರ ಇರುವುದರಿಂದ ಹೆಸ್ಕಾಂ ನೌಕರರು ಅಂತರ ಕಾಯ್ದುಕೊಂಡು ಸ್ಮಾರಕಕ್ಕೆ ಪೂಜೆ ಸಲ್ಲಿಸಿದರು. ಕರ್ತವ್ಯದಲ್ಲಿ ಈ ಹಿಂದೆ ಸಾವನ್ನಪ್ಪಿದ ನೌಕರರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.