ರಾಣೆಬೆನ್ನೂರು: ಹಾವೇರಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ತಾನು ಕೂಡ ಆಕಾಂಕ್ಷಿ ಎಂದು ಕಾಕೋಳ ಕ್ಷೇತ್ರದ ಜಿ.ಪಂ. ಸದಸ್ಯ ಏಕನಾಥ ಭಾನುವಳ್ಳಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ನಾನೂ ಆಕಾಂಕ್ಷಿ ಎಂದು ಪಕ್ಷದ ಹಿರಿಯ ನಾಯಕರ ಮುಂದೆ ಈ ಹಿಂದೆ ಹೇಳಿಕೊಂಡಿದ್ದೆ. ಆದ್ರೆ ಪಕ್ಷದ ತೀರ್ಮಾನದಂತೆ ಬೇರೆಯವರು ಅಧಿಕಾರ ವಹಿಸಿಕೊಂಡಿದ್ದರು. ಸದ್ಯ ಅಧ್ಯಕ್ಷ ಸ್ಥಾನ ತೆರವಾಗಿದ್ದು, ಈ ಬಾರಿಯಾದ್ರೂ ರಾಣೆಬೆನ್ನೂರು ತಾಲೂಕಿಗೆ ಆದ್ಯತೆ ಸಿಗಬಹುದು ಎಂಬ ವಿಶ್ವಾಸವಿದೆ ಎಂದರು.
ಜಿ.ಪಂ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾದ ಕಾರಣ ಸಣ್ಣ ಸಮಾಜದ ವ್ಯಕ್ತಿಯಾದ ನನ್ನನ್ನು ಈ ಬಾರಿ ಪಕ್ಷದ ಮುಖಂಡರು ಆಯ್ಕೆ ಮಾಡುತ್ತಾರೆ ಎಂಬ ನಂಬಿಕೆಯಿದೆ. ಬಿಜೆಪಿ ಸದಸ್ಯರ ಬಲ ಹೆಚ್ಚಾಗಿರುವ ಕಾರಣ ಸುಮಾರು ನಾಲ್ಕು ಜನರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷರು ಸಭೆ ಕರೆದ ನಂತರ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಯಾರಾಗಬಹುದು ಎಂಬುದು ತಿಳಿಯಲಿದೆ ಎಂದು ಭಾನುವಳ್ಳಿ ಹೇಳಿದ್ರು.