ETV Bharat / state

ಹಾವೇರಿ: 6 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ಅನುಮಾನಾಸ್ಪದ ಸಾವು

ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ ನಡೆದಿದೆ.

Haveri
ಹಾವೇರಿ
author img

By

Published : Feb 2, 2022, 7:23 AM IST

ಹಾವೇರಿ: ಆರು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ ನಡೆದಿದೆ. ಮನುಜಾ (20) ಮೃತ ಗೃಹಿಣಿ. ಕಳೆದ ಐದು ದಿನಗಳ ಹಿಂದೆ ಗಂಡನ ಮನೆಯಿಂದ ಕಾಣೆಯಾಗಿದ್ದ ಮನುಜಾ ಕಾಗಿನೆಲೆಯ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಎನ್ನಲಾಗ್ತಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಬ್ಯಾಡಗಿ ತಾಲೂಕಿನ ಕಳಗೊಂಡ ಗ್ರಾಮದವಳಾಗಿದ್ದ ಮನುಜಾ ಆರು ತಿಂಗಳ ಹಿಂದೆ ಅದೇ ಗ್ರಾಮದ ಬಸವರಾಜ ಎಂಬಾತನನ್ನ ಪ್ರೀತಿಸಿ ಮದುವೆಯಾಗಿದ್ದಳು. ಈ ಮಧ್ಯೆ ಅವರಿಗೆ ಪತಿ ಬಸವರಾಜ ಮತ್ತು ಆತನ ಮನೆಯವರು ಕಿರಕುಳ ನೀಡುತ್ತಿದ್ದರು ಎಂದು ಮನುಜಾ ಪೋಷಕರು ದೂರಿದ್ದಾರೆ. ಅಲ್ಲದೇ ಐದು ದಿನಗಳ ಹಿಂದೆ ನಮ್ಮ ಮಗಳನ್ನು ಕೊಲೆ ಮಾಡಿ ಕೆರೆಯಲ್ಲಿ ಬಿಸಾಕಿ ಹೋಗಿದ್ದಾರೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.

ಇನ್ನು ಮನುಜಾ ಮೃತದೇಹ ತೆಗೆದುಕೊಂಡು ಹೋಗದ ಬಸವರಾಜ ಮತ್ತು ಅವನ ಮನೆಯವರ ವಿರುದ್ಧ ಮನುಜಾ ಸಂಬಂಧಿಕರು ತೀವ್ರ ಆಕ್ರೋಶಪಡಿಸಿದ್ದಾರೆ. ಕಾಗಿನೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ಕೋವಿಡ್ ಲಸಿಕೆಯ ಅಡ್ಡ ಪರಿಣಾಮದಿಂದ ಮಗಳು ಸಾವು ಆರೋಪ: ₹1000 ಕೋಟಿ ರೂ. ಪರಿಹಾರ ಕೇಳಿ ಹೈಕೋರ್ಟ್​ಗೆ ಅರ್ಜಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.