ಹಾವೇರಿ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಶಿಗ್ಗಾಂವಿಯ ಸಾರ್ವಜನಿಕ ಆಸ್ಪತ್ರೆಗೆ ನೀಡಿ ಪರಿಶೀಲನೆ ನಡೆಸಿದರು.
ಪಿಪಿಇ ಕಿಟ್ ಧರಿಸಿದ ಸಚಿವ ಬೊಮ್ಮಾಯಿ ವೈದ್ಯರ ಜೊತೆ ಮಾತನಾಡಿದರು. ರೋಗಿಗಳ ಚಿಕಿತ್ಸೆ ಸೇರಿದಂತೆ ವಿವಿಧ ಮಾಹಿತಿಗಳನ್ನ ಪಡೆದರು. ಇದಕ್ಕೂ ಮೊದಲು ತಾವು ಪ್ರತಿನಿಧಿಸುವ ಶಿಗ್ಗಾಂವಿ, ಸವಣೂರು ತಾಲೂಕುಗಳ ಅಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ತಮ್ಮ ಕ್ಷೇತ್ರದಲ್ಲಿನ ಔಷಧಿ ಸಂಗ್ರಹ, ಆಕ್ಸಿಜನ್ ಮತ್ತು ಕೊರೊನಾ ಲಸಿಕೆಗಳ ಕುರಿತ ಮಾಹಿತಿ ಪಡೆದರು. ಆದಷ್ಟು ಹೆಚ್ಚು ಔಷಧಿ ಸೇರಿದಂತೆ ಆಕ್ಸಿಜನ್ ಸಿಲಿಂಡರ್‌ಗಳ ಸಂಗ್ರಹ ಮಾಡಿಕೊಳ್ಳುವಂತೆ ತಿಳಿಸಿದರು.
ಬರುವ ದಿನಗಳಲ್ಲಿ ರೋಗಿಗಳ ಸಂಖ್ಯೆ ಅಧಿಕವಾದರೆ ಅದನ್ನ ಎದುರಿಸಲು ವೈದ್ಯರು ಸಿದ್ಧವಾಗಿರುವಂತೆ ತಿಳಿಸಿದರು.