ETV Bharat / state

ಮನೆ ಕಳೆದುಕೊಂಡವರಿಗೆ ಸಿಕ್ಕಿಲ್ಲ ಶಾಶ್ವತ ಪರಿಹಾರ: ನಟ ಸೋನು ಸೂದ್ ಮೊರೆ ಹೋದ ಹಾವೇರಿ ಸಂತ್ರಸ್ತರು - ನಟ ಸೋನು ಸೂದ್ ಮೊರೆ ಹೋದ ಸಂತ್ರಸ್ಥರು

ಆರು ಮಂದಿ ಯುವಕರು ಸೋನು ಸೂದ್ ಭೇಟಿಯಾಗಲು ಹೊರಡುತ್ತಿದ್ದು, ಸೋನು ಸೂದ್ ಹಲವಾರು ಜನರಿಗೆ ಸಹಾಯ ಮಾಡಿದ್ದಾರೆ. ತಮಗೂ ಕೂಡ ಸಹಾಯ ಮಾಡುವ ಭರವಸೆಯಿಟ್ಟುಕೊಂಡಿದ್ದಾರೆ.

haveri-people-going-to-meet-actor-sonu-sood-and-sought-help
ಮನೆ ಕಳೆದುಕೊಂಡವರಿಗೆ ಸಿಕ್ಕಿಲ್ಲ ಶಾಶ್ವತ ಪರಿಹಾರ: ನಟ ಸೋನು ಸೂದ್ ಮೊರೆ ಹೋದ ಹಾವೇರಿ ಸಂತ್ರಸ್ತರು
author img

By

Published : Jul 14, 2021, 11:31 PM IST

ಹಾವೇರಿ: ಜಿಲ್ಲೆಯ ಶಾಂತಿನಗರದಲ್ಲಿ ಸುಡುಗಾಡು ಸಿದ್ದರ 45 ಕುಟುಂಬಗಳು ತಗಡಿನ ಶೆಡ್‌ನಲ್ಲಿ ವಾಸಿಸುತ್ತಿವೆ. 2019ರಲ್ಲಿ ಸುರಿದ ಭಾರಿ ಮಳೆಗೆ ಮನೆ ಕಳೆದುಕೊಂಡಿದ್ದ ಈ ಕುಟುಂಬಗಳಿಗೆ ಸರ್ಕಾರ ತಗಡಿನ ಶೆಡ್ ಹಾಕಿಕೊಟ್ಟಿತ್ತು. ಈಗ ಮತ್ತೆ ಭಾರಿ ಮಳೆ ಮತ್ತು ಗಾಳಿಗೆ ಶೆಡ್​ಗಳು ಹಾರಿಹೋಗಿವೆ.

ಮನೆಯಿಲ್ಲದೇ, ಮೂಲಭೂತ ಸೌಕರ್ಯವಿಲ್ಲದೇ ಕುಟುಂಬಗಳಿದ್ದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಸರ್ಕಾರ ಕೆಲ ಸಣ್ಣಪುಟ್ಟ ಸಹಾಯ ಮಾಡಿದ್ದು, ಬಿಟ್ಟರೆ ಯಾವುದೇ ಶಾಶ್ವತ ಪರಿಹಾರ ಕಾರ್ಯ ಮಾಡಿಲ್ಲ. ಆದರೆ ಈಗ ನೊಂದಿರುವ ಕುಟುಂಬಗಳು ಪರಿಹಾರಕ್ಕಾಗಿ ಬಹುಭಾಷಾ ನಟ ಸೋನು ಸೂದ್ ಮೊರೆ ಹೋಗಿವೆ.

ಸೋನು ಸೂದ್ ಭೇಟಿಗೆ ಹೊರಟ ಯುವಕರು

ಆರು ಮಂದಿ ಯುವಕರು ಸೋನು ಸೂದ್ ಭೇಟಿಯಾಗಲು ಹೊರಡುತ್ತಿದ್ದು, ಸೋನು ಸೂದ್ ಹಲವಾರು ಜನರಿಗೆ ಸಹಾಯ ಮಾಡಿದ್ದಾರೆ. ನಮಗೂ ಕೂಡಾ ಸಹಾಯ ಮಾಡುವ ಭರವಸೆಯಿದೆ ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮಾದರಿ ಬಾಡಿಗೆದಾರಿಕೆ ಕಾಯ್ದೆ ಜಾರಿಗೆ ಚಿಂತನೆ: ಪರ-ವಿರೋಧ ಪ್ರತಿಕ್ರಿಯೆ ಹೀಗಿದೆ..

ಮೊದಲಿಗೆ ಪಾದಯಾತ್ರೆ ಮೂಲಕ ಸೋನು ಸೂದ್ ಭೇಟಿಯಾಗಬೇಕೆಂದು ನಿರ್ಧಾರ ಮಾಡಲಾಗಿತ್ತು. ಆದರೆ ಅಧಿಕಾರಿಗಳು ಅನುಮತಿ ನೀಡದ ಕಾರಣದಿಂದ ರೈಲಿನಲ್ಲಿ ಸೋನು ಸೂದ್ ಭೇಟಿಯಾಗಲು ನಿರ್ಧರಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.