ಹಾವೇರಿ: ಇವರ ಹೆಸರು ಸುರೇಶ್. ಹಾವೇರಿ ಜಿಲ್ಲೆಯ ಹಾನಗಲ್‌ನ ಹೊಂಕಣ ನಿವಾಸಿ. ಸ್ವಂತ ಜಮೀನು ಇರದ ಸುರೇಶ್, ಜೀವನೋಪಾಯಕ್ಕೆ ಕಟಮಾ (ಟಂಟಂ) ವಾಹನದಲ್ಲಿ ಶ್ರೀರಾಮ ಟ್ರಾನ್ಸ್ಪೋರ್ಟ್ ಆರಂಭಿಸಿದರು. ಅದರಲ್ಲಿ ಹಾನಿಯಾದ ನಂತರ ಟಾಟಾ ಏಸ್ ವಾಹನ ಖರೀದಿಸಿದರು. ಅದೂ ಕೂಡ ಕೈ ಹಿಡಿಯಲಿಲ್ಲ. ಇದರಿಂದ ಬೇಸತ್ತ ಸುರೇಶ್ ಮುಖ ಮಾಡಿದ್ದು ಕೋಳಿ ಸಾಕಣೆಯತ್ತ.
ಹೌದು. ಎಲ್ಲರಂತೆ ಸುರೇಶ್ ಫಾರ್ಮ ಅಥವಾ ಬಾಯ್ಲರ್ ಕೋಳಿ ಸಾಕಾಣಿಕೆ ಕಡೆ ವಾಲಲಿಲ್ಲ. ಬದಲಿಗೆ ಕೇರಳದಲ್ಲಿ ಕಂಡು ಹಿಡಿದಿದ್ದ 'ಅರ್ಗಾನಿಕ್ ಬಿವಿ 380 ಕೋಳಿ ಸಾಕಾಣಿಕೆ'ಯತ್ತ ಮುಖಮಾಡಿದರು. ಈ ಕೋಳಿ ನಾಟಿ ಕೋಳಿಯಂತೆ ಮೊಟ್ಟೆ ಇಡುತ್ತದೆ. ಇದರ ಮಾಂಸ ನಾಟಿ ಕೋಳಿ ರೀತಿ ಇರುವ ಕಾರಣ ಈ ತಳಿಯ ಕೋಳಿ ಸಾಕಣೆಗೆ ಸುರೇಶ್ ಮುಂದಾದರು.
ಈ ಕೋಳಿ ಮೊಟ್ಟೆಗಳು ತಿಂಗಳುಗಟ್ಟಲೇ ಹಾಳಾಗುವುದಿಲ್ಲ ಮತ್ತು ಸಾಮಾನ್ಯ ಕೋಳಿಗಳ ಮೊಟ್ಟೆಗಳಿಗಿಂತ ದೊಡ್ಡದಾಗಿರುತ್ತವೆ. ಈ ಕೋಳಿ ಒಮ್ಮೆ ಮೊಟ್ಟೆ ಇಡಲು ಆರಂಭಿಸಿದರೆ 380 ದಿನಗಳ ಕಾಲ ಮೊಟ್ಟೆ ಇಡುತ್ತದೆ. ಮೊಟ್ಟೆ ಹಾಕುವ ಅವಧಿ ಮುಗಿದ ನಂತರ ಈ ಕೋಳಿಗಳನ್ನ ನಾಟಿಕೋಳಿಗಳಂತೆ ತಿನ್ನಲು ನೀಡಬಹುದಾಗಿದೆ. 100 ಕೋಳಿಗಳ ಸಾಕಣೆಯನ್ನ ಅತ್ಯುತ್ತಮವಾಗಿ ನಿರ್ವಹಣೆ ಮಾಡಿದರೆ ನಿತ್ಯ 90 ಮೊಟ್ಟೆ ಪಡೆಯಬಹುದು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಕೇವಲ 100 ಕೋಳಿಗಳನ್ನು ಸಾಕಲು ಲಕ್ಷ ರೂ. ಬಂಡವಾಳ ಹೂಡಿದ್ದ ಸುರೇಶ್ ಅವರಿಗೆ ಆರಂಭದಲ್ಲಿ ಹಲವು ಸಮಸ್ಯೆಗಳು ಎದುರಾದವು. ಉತ್ಪಾದನೆ ಅಧಿಕವಿದ್ದರೂ ಬೇಡಿಕೆಯಿರಲಿಲ್ಲ. ಸುರೇಶ್ ಈ ಕುರಿತಂತೆ ಕರಪತ್ರ ಮಾಡಿ ಜನರಿಗೆ ಅರಿವು ಮೂಡಿಸಿದರು. ಇದಾದ ನಂತರ ಸುರೇಶ್ ಅವರ ಲಕ್ ಬದಲಾಗಿದೆ. ಮೊಟ್ಟೆಗಳಿಗೆ ಭಾರಿ ಬೇಡಿಕೆ ಬರಲಾರಂಭಿಸಿದೆ. ಬೇಡಿಕೆಗೆ ತಕ್ಕಂತೆ ಮೊಟ್ಟೆ ಪೂರೈಸಲು ಅವರಿಗೆ ಸಾಧ್ಯವಾಗುತ್ತಿಲ್ಲವಂತೆ.
ಹಾವೇರಿ, ಹಾನಗಲ್ ಮತ್ತು ಶಿರ್ಶಿಗೆ ಹೊಂಕಣದಿಂದ ನಿತ್ಯ ಅರ್ಗಾನಿಕ್ ಮೊಟ್ಟೆ ಪೂರೈಸಲಾಗುತ್ತಿದೆ. ನೂರು ಕೋಳಿಗಳಿಂದ ಸುರೇಶ್ ಪ್ರತಿ ತಿಂಗಳು 10 ಸಾವಿರ ರೂ.ಆದಾಯ ಗಳಿಸುತ್ತಿದ್ದಾರೆ. ಕೋಳಿಗಳ ಸಂಖ್ಯೆ 500 ಮಾಡಿದರೆ, ತಿಂಗಳಿಗೆ 50 ಸಾವಿರ ರೂಪಾಯಿ ಆದಾಯಗಳಿಸಬಹುದು ಎನ್ನುತ್ತಾರೆ ಸುರೇಶ್.
ಇದನ್ನೂ ಓದಿ: ಕಾಡಿನಲ್ಲಿ ಮೃತಪಟ್ಟ ಗೃಹಿಣಿ: ಪತಿಯೊಂದಿಗೆ ಅರಣ್ಯಕ್ಕೆ ತೆರಳಿದ್ದೇಕೆ ಎಂಬುದೇ ಅನುಮಾನ..!