ಹಾವೇರಿ: ಜಿಲ್ಲೆಯಲ್ಲಿ ಮುಂಗಾರು ಜೋರಾಗಲು ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. ಈಗಾಗಲೇ ಸುರಿದ ಮಳೆಯಿಂದ ಹದವಾಗಿರುವ ಜಮೀನುಗಳಲ್ಲಿ ರೈತರು ಬಿತ್ತನೆ ಕಾರ್ಯ ಕೈಗೊಂಡಿದ್ದಾರೆ.
ಮೊದಲೇ ಸಿದ್ಧಪಡಿಸಿಕೊಂಡ ಜಮೀನುಗಳಲ್ಲಿ ಬೇರೆ ರೈತರು ಹಾಗೂ ಎರಡು ಮೂರು ಕೂರಿಗೆಗಳ ಸಹಾಯದಿಂದ ಬಿತ್ತನೆ ಕಾರ್ಯ ಕೈಗೊಳ್ಳುತ್ತಿದ್ದಾರೆ. ಪ್ರತಿ ವರ್ಷ ಒಂದಿಲ್ಲಾ ಒಂದು ಸಮಸ್ಯೆಯಿಂದ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ವರ್ಷವಾದರೂ ಮುಂಗಾರು ಚೆನ್ನಾಗೆ ಬರಲಿ, ಬೆಳೆಗೆ ಬೆಲೆ ಸರಿಯಾಗಿ ಸಿಗಲಿ ಎಂದು ರೈತರು ಬೇಡಿಕೊಳ್ಳುತ್ತಿದ್ದಾರೆ.