ETV Bharat / state

ಇದು ಬರೀ ಜೈಲಲ್ಲೋ ಅಣ್ಣ .. ಕೃಷಿ ಜೊತೆ ಮನಪರಿವರ್ತನಾ ಕೇಂದ್ರ - ಕೆರಿಮತ್ತಿಹಳ್ಳಿ ಗ್ರಾಮದ ಬಳಿ ಇರುವ  ಜಿಲ್ಲಾ ಕಾರಾಗೃಹ

ಹಾವೇರಿ ಸಮೀಪದ ಕೆರಿಮತ್ತಿಹಳ್ಳಿ ಗ್ರಾಮದ ಬಳಿ ಇರುವ ಜಿಲ್ಲಾ ಕಾರಾಗೃಹ ಕಳೆದ ಕೆಲವು ವರ್ಷಗಳಿಂದ ತನ್ನದೇ ಆದ ವಿಶೇಷ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿದೆ. ಜೈಲುಗಳು ಮನಪರಿವರ್ತನಾ ಕೇಂದ್ರಗಳಾಗಬೇಕು ಎನ್ನುವುದಕ್ಕೆ ಹಾವೇರಿ ಜಿಲ್ಲಾ ಕಾರಾಗೃಹ ಉದಾಹರಣೆಯಾಗಿದೆ.

Special activities in Haveri District Jail
ಕೃಷಿ ಚಟುವಟಿಕೆಯಲ್ಲಿ ನಿರತರಾದ ಕೈದಿಗಳು
author img

By

Published : Oct 11, 2022, 7:53 AM IST

Updated : Oct 12, 2022, 4:36 PM IST

ಹಾವೇರಿ: ಕಾರಾಗೃಹಗಳು ಕೈದಿಗಳನ್ನು ತಿದ್ದುವ ಮನಪರಿವರ್ತನಾ ಕೇಂದ್ರಗಳಾಗಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಅಪರಾಧ ಮಾಡುವ ಮನಸ್ಸುಗಳು ಕಡಿಮೆಯಾಗುತ್ತವೆ. ಅಲ್ಲದೆ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತವೆ ಎನ್ನುವ ಮಾತಿದೆ. ಈ ಮಾತಿಗೆ ತಕ್ಕಂತೆ ಇದೆ ಹಾವೇರಿ ಜಿಲ್ಲಾ ಕಾರಾಗೃಹ.

haveri-district-jail-is-attracting-attention-through-special-activities
ಕೃಷಿ ಚಟುವಟಿಕೆಯಲ್ಲಿ ನಿರತರಾದ ಕೈದಿಗಳು

ಜಿಲ್ಲಾ ಕೇಂದ್ರದ ಸಮೀಪ ಇರುವ ಕೆರಿಮತ್ತಿಹಳ್ಳಿ ಗ್ರಾಮದ ಬಳಿಯ ಜಿಲ್ಲಾ ಕಾರಾಗೃಹ ಕಳೆದ ಕೆಲವು ವರ್ಷಗಳಿಂದ ತನ್ನದೇ ಆದ ವಿಶೇಷ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿದೆ. ಕಾರಾಗೃಹದಲ್ಲಿ ಶುದ್ಧ ಕುಡಿಯವ ನೀರಿನ ಘಟಕ, ಸ್ವತಂತ್ರ ಗ್ರಂಥಾಲಯ ಸೇರಿದಂತೆ ಹಲವು ವೈಶಿಷ್ಟ್ಯಗಳಿಂದ ಹಾವೇರಿ ಜಿಲ್ಲಾ ಕಾರಾಗೃಹ ಗಮನ ಸೆಳೆಯುತ್ತಿದೆ.

ಕೃಷಿ ಚಟುವಟಿಕೆಗೆ ಅವಕಾಶ: ಈ ಕಾರಾಗೃಹದಲ್ಲಿ ಸದ್ಯ 162 ಜನ ಕೈದಿಗಳಿದ್ದಾರೆ. ಈ ಜೈಲು ಹಕ್ಕಿಗಳಿಗೆ ಕೃಷಿ ಚಟುವಟಿಕೆಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಾರಾಗೃಹಕ್ಕೆ ಸೇರಿದ 16 ಎಕರೆ ಜಮೀನಿನಲ್ಲಿ ಕೈದಿಗಳು ಊಟಕ್ಕೆ ಬೇಕಾಗುವ ತರಕಾರಿ ಮತ್ತು ಸೊಪ್ಪನ್ನು ಬೆಳೆಯಲಾಗುತ್ತದೆ.

Special activities in Haveri District Jail
ಕೃಷಿ ಚಟುವಟಿಕೆಯಲ್ಲಿ ನಿರತರಾದ ಕೈದಿಗಳು

ಬದನೆಕಾಯಿ, ಟೊಮೆಟೋ, ಮೆಣಸಿನಕಾಯಿ, ಕೋಸು ಸೇರಿದಂತೆ ವಿವಿಧ ತರಕಾರಿ ಬೆಳೆಯಲಾಗುತ್ತದೆ. ಅಲ್ಲದೇ ಅದರ ಜತೆಗೆ ಕೊತ್ತಂಬರಿ, ಕರಿಬೇವು, ಪಾಲಕ್ ಮತ್ತು ಮೆಂತೆ ಸೇರಿದಂತೆ ವಿವಿಧ ಸೊಪ್ಪುಗಳನ್ನ ಸಹ ಬೆಳೆಯಲಾಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ವರ್ಷಕ್ಕೆ 3 ಲಕ್ಷ ರೂಪಾಯಿ ಆದಾಯವನ್ನು ಕಾರಾಗೃಹ ಉಳಿತಾಯ ಮಾಡುತ್ತದೆ.

'ಮಂತ್ ಆಫ್ ದಿ ಜೈಲ್' ಪ್ರಶಸ್ತಿ: ಕಾರಾಗೃಹದ ಈ ಕೃಷಿ ಚಟುವಟಿಕೆಗಳು ಜೈಲು ಹಕ್ಕಿಗಳಿಗೆ ಆದಾಯವನ್ನು ತರುತ್ತಿವೆ. ಕಾರಾಗೃಹಕ್ಕೆ ಸೇರಿದ ಜಮೀನಿನಲ್ಲಿ ಮೆಕ್ಕೆಜೋಳ, ಪೇರಲ, ತೆಂಗು, ನಿಂಬೆ ಸಹ ಬೆಳೆಯಲಾಗುತ್ತಿದೆ. ಜಿಲ್ಲಾ ಕಾರಗೃಹದಲ್ಲಿ ಕೃಷಿ ಚಟುವಟಿಕೆಗಳಿಗಾಗಿ 2 ಎತ್ತುಗಳನ್ನು ಸಹ ಸಾಕಲಾಗಿದೆ. ಈಗಾಗಲೇ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಹಾವೇರಿ ಜಿಲ್ಲಾ ಕಾರಾಗೃಹ ಮೇ ತಿಂಗಳಲ್ಲಿ ರಾಜ್ಯಮಟ್ಟದ 'ಮಂತ್ ಆಫ್ ದಿ ಜೈಲ್' ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಈ ಪ್ರಶಸ್ತಿ ಸ್ಥಾಪಿಸಿದ ನಂತರ ಮೊದಲ ಬಾರಿಗೆ ಈ ಗೌರವಕ್ಕೆ ಪಾತ್ರವಾದ ಜೈಲು ಹಾವೇರಿಯದ್ದು ಎನ್ನುವ ಹೆಗ್ಗಳಿಕೆ ಪಡೆದಿದೆ.

ಇದು ಬರೀ ಜೈಲಲ್ಲ.. ಕೃಷಿ ಜೊತೆಗೆ ಕೈದಿಗಳ ಮನಪರಿವರ್ತನಾ ಕೇಂದ್ರ

ವಿಶೇಷ ಉಪನ್ಯಾಸಕರಿಂದ ಬೋಧನೆ: ಕಾರಾಗೃಹದಲ್ಲಿರುವ ಗ್ರಂಥಾಲಯದಲ್ಲಿ ಕೈದಿಗಳು ಪುಸ್ತಕ ಓದುವ ಮೂಲಕ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳುತ್ತಾರೆ. ಅನಕ್ಷರಸ್ಥ ಕೈದಿಗಳಿಗೆ ಅಕ್ಷರ ಜ್ಞಾನ ಕಲಿಸಲಾಗುತ್ತಿದೆ. ಜೊತೆಗೆ ವಿಶೇಷ ಉಪನ್ಯಾಸಕರನ್ನು ನೇಮಿಸಿ ಜೈಲಿನ ಹಕ್ಕಿಗಳಿಗೆ ಬೋಧನೆ ಮಾಡಲಾಗುತ್ತದೆ. ಜತೆಗೆ ಕಾರಾಗೃಹದಲ್ಲಿ ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಕೈದಿಗಳಿಗೆ ರಕ್ತದಾನದ ಮಹತ್ವ ಸಹ ಸಾರಲಾಗುತ್ತದೆ.

ಜೈಲುಗಳು ಮನಪರಿವರ್ತನಾ ಕೇಂದ್ರಗಳಾಗಬೇಕು ಎನ್ನುವುದಕ್ಕೆ ಹಾವೇರಿ ಜಿಲ್ಲಾ ಕಾರಾಗೃಹ ಉದಾಹರಣೆಯಾಗಿದೆ. ಇಲ್ಲಿ ಅಕ್ಷರಭ್ಯಾಸ, ಅಕ್ಷರ ಜ್ಞಾನ ಕಲಿತ ಕೈದಿಗಳು ಬಿಡುಗಡೆಯಾದ ಬಳಿಕ ಅಪರಾಧ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳದೆ ಎಲ್ಲರಂತೆ ಸಾಮಾನ್ಯ ಜೀವನ ನಡೆಸುವ ಮೂಲಕ ಅಧಿಕಾರಿಗಳ ಮಾರ್ಗದರ್ಶನ ಮತ್ತು ಶ್ರಮ ಸಾರ್ಥಕ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹಾವೇರಿ ಜಿಲ್ಲಾ ಕಾರಾಗೃಹ ಅಧೀಕ್ಷಕ - ಸಿಬ್ಬಂದಿ ನಡುವೆ ಗಲಾಟೆ: ತನಿಖೆಗೆ ಡಾ.ರಂಗನಾಥ್​​ ನೇಮಕ

Last Updated : Oct 12, 2022, 4:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.