ಹಾವೇರಿ: ನಿಲ್ಲದ ವರುಣನ ಅಬ್ಬರ, ಜಿಲ್ಲೆಯಲ್ಲಿ ಹರಿಯುವ ಕುಮುದ್ವತಿ, ವರದಾ, ಧರ್ಮ ಮತ್ತು ತುಂಗಭದ್ರಾ ನದಿಯಲ್ಲಿ ದಿನೇದಿನೆ ನೀರಿನ ಹರಿವು ಹೆಚ್ಚುತ್ತಿದ್ದು, ಪ್ರವಾಹ ಸ್ವರೂಪ ಪಡೆದಿದೆ.
ರಟ್ಟೀಹಳ್ಳಿ-ಮಾಸೂರು, ಕುಡುಪಲಿ-ರಾಣೇಬೆನ್ನೂರು, ತುಮ್ಮಿನಕಟ್ಟಿ-ರಾಣೇಬೆನ್ನೂರು,ರಟ್ಟೀಹಳ್ಳಿ-ಹಿರೇಮೊರಬ ರಸ್ತೆಯ ಸಂಪರ್ಕ ಸ್ಥಗಿತಗೊಂಡಿದ್ದು ಈ ಮಾರ್ಗವಾಗಿ ಸಂಚಾರ ಕಷ್ಟವಾಗಿದೆ. ಸೇತುವೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ಗ್ರಾಮಗಳ ನಡುವಿನ ಸಂಪರ್ಕ ಬಂದ್ ಆಗಿದೆ.
ನಾಗನೂರು, ಬೆಂಚಳ್ಳಿ, ಶಾಡಗುಪ್ಪಿ, ಹರವಿ, ವರದಳ್ಳಿ ಹಲಸೂರು, ಕರಿಕ್ಯಾತನಹಳ್ಳಿ, ಸೋಮಾಪುರ ಗ್ರಾಮದ ಸಾವಿರಾರು ಎಕರೆ ಜಮೀನು ಜಲಾವೃತವಾಗಿವೆ. ಹೊಸರಿತ್ತಿ, ಕೋಣನತಂಬಗಿ, ಹಾಲಗಿ, ಮರೋಳ, ಹಳೆಕಿತ್ತೂರು, ಹರವಿ ಗ್ರಾಮಗಳಿಗೆ ನೀರು ನುಗ್ಗಿದ್ದು, ಗ್ರಾಮವು ಸಂಪೂರ್ಣ ಜಲಾವೃತಗೊಂಡಿದೆ. ಮನೆಗಳಲ್ಲಿ ನೀರು ತುಂಬಿ ಹೋಗಿರುವುದರಿಂದ ಅಕ್ಕಪಕ್ಕದಲ್ಲಿ ನಿರ್ಮಿಸಿರುವ ಗಂಜಿ ಕೇಂದ್ರಗಳಿಗೆ ಗ್ರಾಮಸ್ಥರು ಪ್ರಯಾಣ ಬೆಳೆಸುತ್ತಿದ್ದಾರೆ.