ಹಾವೇರಿ: ಹಾವೇರಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಮಾಸ್ಕ್ ಧರಿಸುವ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. ನಗರದ ಜೆ.ಪಿ.ವೃತ್ತದಿಂದ ಪಾದಯಾತ್ರೆ ಮೂಲಕ ತೆರಳಿದ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದವರಿಗೆ ನೂರು ರೂಪಾಯಿ ದಂಡ ವಿಧಿಸಿದರು.
ಮಾಸ್ಕ್ ಧರಿಸದೆ ಹೊಟೇಲ್‌ನಲ್ಲಿ ನಿಂತಿದ್ದ ಯುವಕನನ್ನ ಗಮನಿಸಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೋಟೆಲ್ಗೆ ತೆರಳಿ ಯುವಕನಿಗೆ ನೂರು ರುಪಾಯಿ ದಂಡ ಹಾಕಿದ್ರು. ನಂತರ ಅಧಿಕಾರಿಗಳು ಹಾಗೂ ಪೊಲೀಸರು ಮಾಸ್ಕ್ ಧರಿಸದೆ ಓಡಾಡ್ತಿದ್ದವರನ್ನ ತಡೆದು ದಂಡ ಹಾಕಿದ್ರು.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದ್ದು, ಜನರು ಮಾಸ್ಕ್ ಧರಿಸಿಕೊಂಡು ಓಡಾಡಬೇಕಿದೆ. ಹೀಗಾಗಿ ಮಾಸ್ಕ್ ಧರಿಸದೆ ಓಡಾಡೋರಿಗೆ ದಂಡ ವಿಧಿಸೋ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.