ETV Bharat / state

ಹಾವೇರಿ: ಕೋವಿಡ್​ ಮಹಾಮಾರಿ ಜಯಿಸಿದ ಮೂವರ ಬಿಡುಗಡೆ

ಕೊರೊನಾ ಸೋಂಕಿನಿಂದ ಮೂವರು ಗುಣಮುಖರಾಗಿದ್ದು ಇಂದು ಹಾವೇರಿ ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

Haveri: Discharge of three who won Kovid 19
ಹಾವೇರಿ: ಕೋವಿಡ್ 19​ ಮಹಾಮಾರಿ ಜಯಿಸಿದ ಮೂವರ ಡಿಸ್ಚಾರ್ಜ್​
author img

By

Published : Jun 10, 2020, 4:46 PM IST

ಹಾವೇರಿ: ಕೊರೊನಾ ಸೋಂಕಿನಿಂದ ಗುಣಮುಖರಾದ ಮೂವರನ್ನು ಇಂದು ಹಾವೇರಿ ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯ್ತು.

ಹಾವೇರಿ: ಕೋವಿಡ್ 19​ ಮಹಾಮಾರಿ ಜಯಿಸಿದ ಮೂವರ ಡಿಸ್ಚಾರ್ಜ್​

ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಬೀದಿಬದಿ ವ್ಯಾಪಾರ ಮಾಡಿಕೊಂಡಿದ್ದ ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ಮೂವರು ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ಮರಳಿದ್ದರು. ಇವರಲ್ಲಿ 2 ವರ್ಷದ ಹೆಣ್ಣು ಮಗು P-2494, 28 ವರ್ಷದ ಮಗುವಿನ ತಾಯಿ P-2496 ಮತ್ತು 22 ವರ್ಷದ P-2497 ಈ ಮೂವರ ಕೊರೊನಾ ಪರೀಕ್ಷಾ ವರದಿ ಮೇ 28, 2020ರಂದು ಪಾಸಿಟಿವ್​ ಬಂದಿದ್ದು ಜಿಲ್ಲಾಸ್ಪತ್ರೆಯ ಕೋವಿಡ್​ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಸದ್ಯ ಮೂವರ ಆರೋಗ್ಯದಲ್ಲೂ ಚೇತರಿಕೆಯಾಗಿದ್ದು, ವರದಿಗಳು ನೆಗೆಟಿವ್ ಬಂದಿವೆ. ಹೀಗಾಗಿ ಜಿಲ್ಲಾಸ್ಪತ್ರೆಯ ಪ್ರಭಾರ ಶಸ್ತ್ರ ಚಿಕಿತ್ಸಕ ಸುರೇಶ ಪೂಜಾರ ನೇತೃತ್ವದಲ್ಲಿ ಮೂವರನ್ನ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯ್ತು. ಗುಣಮುಖರಾದ ಮೂವರಿಗೆ ಹೂ ನೀಡಿ, ಹೋಂ ಕ್ವಾರಂಟೈನ್​ ಅನುಸರಿಸುವಂತೆ ಸೂಚಿಸಿ ಆ್ಯಂಬ್ಯುಲೆನ್ಸ್ ವಾಹನದ ಮೂಲಕ ಅವರ ಮನೆಗೆ ಕಳುಹಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.