ETV Bharat / state

ಉಕ್ರೇನ್​ನಲ್ಲಿ ಮೃತಪಟ್ಟ ನವೀನ್ ನಿವಾಸಕ್ಕೆ ಹಾವೇರಿ ಡಿಸಿ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ - Russia Ukraine News

Russia Ukraine War crisis.. ಉಕ್ರೇನ್​ನಲ್ಲಿ ಮೃತಪಟ್ಟ ನವೀನ್ ನಿವಾಸಕ್ಕೆ ಹಾವೇರಿ ಡಿಸಿ ಸಂಜಯ್ ಶೆಟ್ಟಿ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಕೆಲ ಕಾಲ ಚರ್ಚಿಸಿದರು. ಈ ವೇಳೆ ಶೇಖರಗೌಡ ಅವರು ತಮ್ಮ ಪುತ್ರನ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರಲು ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.

ನವೀನ್ ನಿವಾಸಕ್ಕೆ ಹಾವೇರಿ ಡಿಸಿ ಭೇಟಿ
ನವೀನ್ ನಿವಾಸಕ್ಕೆ ಹಾವೇರಿ ಡಿಸಿ ಭೇಟಿ
author img

By

Published : Mar 2, 2022, 12:59 PM IST

Updated : Mar 2, 2022, 2:02 PM IST

ಹಾವೇರಿ: ಚಳಗೇರಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಸಂಜಯ್ ಶೆಟ್ಟಿ ಭೇಟಿ ಉಕ್ರೇನ್​ನಲ್ಲಿ ರಷ್ಯಾ ದಾಳಿ ವೇಳೆ ಮೃತಪಟ್ಟ ನವೀನ್ ತಂದೆ ಶೇಖರಗೌಡ ಜೊತೆ ಮಾತುಕತೆ ನಡೆಸಿ ಸಾಂತ್ವನ ಹೇಳಿದರು. ಈ ವೇಳೆ ಶೇಖರಗೌಡ ಅವರು ತಮ್ಮ ಪುತ್ರನ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರಲು ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿ, ನವೀನ್​ ಒಬ್ಬ ಧೈರ್ಯಶಾಲಿ ಯುವಕ. ಹೊರಗಡೆ ಆಹಾರ ತರಲು ಹೋಗಿದ್ದ ವೇಳೆ ಸಾವನ್ನಪ್ಪಿದ್ದಾನೆ. ಅವನ ಪಾರ್ಥಿವ ಶರೀರವನ್ನು ತರುವ ಕೆಲಸ ಮಾಡಬೇಕಿದೆ. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ನವೀನ್ ಕುಟುಂಬಸ್ಥರಿಗೆ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ ಎಂದರು‌.

ನವೀನ್ ನಿವಾಸಕ್ಕೆ ಹಾವೇರಿ ಡಿಸಿ ಭೇಟಿ

ಉಕ್ರೇನ್​ನಲ್ಲಿ ಯುದ್ಧದ ಪರಿಸ್ಥಿತಿ ಇದೆ. ನಮ್ಮ ಜಿಲ್ಲೆಯ ಉಳಿದ ಎಲ್ಲ ವಿದ್ಯಾರ್ಥಿಗಳು ಸೇಫ್ ಆಗಿದ್ದಾರೆ. ಅವರನ್ನ ದೇಶಕ್ಕೆ ಮರಳಿ ಕರೆ ತರುವ ಕೆಲಸವನ್ನ ಮಾಡ್ತಿದ್ದೇವೆ. ಉಕ್ರೇನ್​ನಲ್ಲಿರುವ ವಿದ್ಯಾರ್ಥಿಗಳ ಎಲ್ಲಾ ಕುಟುಂಬಸ್ಥರನ್ನ ನಮ್ಮ ಅಧಿಕಾರಿಗಳು ಭೇಟಿ ಮಾಡಿ ಬಂದಿದ್ದಾರೆ ಎಂದರು. ಈ ವೇಳೆ ಜಿಲ್ಲಾ‌ ಪಂಚಾಯತ್​ ಸಿಇಒ ಮೊಹಮ್ಮದ್​ ರೋಶನ್ ಕೂಡ ಉಪಸ್ಥಿತರಿದ್ದರು.

ಇದನ್ನೂ ಓದಿ: ಉಕ್ರೇನ್​ನಲ್ಲಿ ರಷ್ಯಾ ದಾಳಿ ವೇಳೆ ಮೃತಪಟ್ಟ ಹಾವೇರಿಯ ಯುವಕನ ಮೃತದೇಹ ಪತ್ತೆ

Last Updated : Mar 2, 2022, 2:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.