ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ರವಿವಾರ 12 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರಿನಲ್ಲಿ ವೈದ್ಯ ಸೇರಿ ಐವರಿಗೆ ಸೋಂಕು ತಗುಲಿದೆ.
P-9546ರ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ P-9546ರ ಪ್ರಾಥಮಿಕ ಸಂಪರ್ಕದಿಂದ ಓರ್ವರಿಗೆ ಮತ್ತು ರಟ್ಟಿಹಳ್ಳಿಯಲ್ಲಿ ಐವರಿಗೆ ಸೋಂಕಿರುವುದು ಗೊತ್ತಾಗಿದೆ. ಇನ್ನು, ಹಾನಗಲ್ ಪಟ್ಟಣದ ಮೂವರು ಆಶಾ ಕಾರ್ಯಕರ್ತೆಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆಶಾ ಕಾರ್ಯಕರ್ತೆಯರಿಗೆ ನಿಗದಿತ ತಪಾಸಣೆ ನಡೆಸಿದ್ದರಿಂದ ಮೂವರಲ್ಲಿ ಸೋಂಕು ದೃಢಪಟ್ಟಿದೆ.
ಸವಣೂರು ಪಟ್ಟಣದ ಕಂಟೈನ್ಮೆಂಟ್ ಝೋನ್ನ 23 ವರ್ಷದ ಗರ್ಭಿಣಿ P-8699ರ ಸಂಪರ್ಕದಿಂದ ಇಬ್ಬರಿಗೆ ಸೋಂಕು ಹರಡಿದೆ. ರಾಣೆಬೆನ್ನೂರು ನಗರದ ಐದು ವರ್ಷದ ಬಾಲಕಿಗೆ P-9411ರ ಪ್ರಾಥಮಿಕ ಸಂಪರ್ಕದಿಂದ ಸೋಂಕು ಪಸರಿಸಿದೆ. ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಸೋಂಕಿತರು ವಾಸವಿದ್ದ ಪ್ರದೇಶವನ್ನು ಜಿಲ್ಲಾಡಳಿತ ಸೀಲ್ಡೌನ್ ಘೋಷಿಸಿದೆ.
ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 68ಕ್ಕೆ ಏರಿದೆ.