ETV Bharat / state

ಕೊರೊನಾ ಬಂದವರೆಲ್ಲ ಹೆದರಬೇಕಿಲ್ಲ: ಕೊರೊನಾ ಗೆದ್ದು ಬಂದ ಚಿತ್ರಕಲೆ ಶಿಕ್ಷಕ ಹಿರೇಮಠ - corona news today

ಸಾರ್ವಜನಿಕರು ಕೊರೊನಾ ಸೋಂಕಿಗೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಕೊರೊನಾ ಗೆದ್ದು ಬಂದ ಚಿತ್ರಕಲೆ ಶಿಕ್ಷಕ ಎಂ.ಜಿ.ಹಿರೇಮಠ ಹೇಳಿದ್ದಾರೆ.

haveri corona latest news
ಕೊರೊನಾ ಗೆದ್ದು ಬಂದ ಚಿತ್ರಕಲೆ ಶಿಕ್ಷಕ ಹಿರೇಮಠ
author img

By

Published : Sep 5, 2020, 12:55 AM IST

ಹಾವೇರಿ: ಕೊರೊನಾ ಮಾರಣಾಂತಿಕ ರೋಗವಲ್ಲ. ಇದು ಬಂದವರೆಲ್ಲಾ ಹೆದರಬೇಕಾಗಿಲ್ಲಾ ಎನ್ನುತ್ತಾರೆ ಕೊರೊನಾ ಗೆದ್ದು ಬಂದ ಚಿತ್ರಕಲೆ ಶಿಕ್ಷಕ ಎಂ.ಜಿ.ಹಿರೇಮಠ.

haveri corona latest news
ಕೊರೊನಾ ಗೆದ್ದು ಬಂದ ಚಿತ್ರಕಲೆ ಶಿಕ್ಷಕ ಹಿರೇಮಠ

ದೇಹದಲ್ಲಿ ಅಸಮತೋಲನ ಕಾಡಿತ್ತು. ಒಂದು ಬಾರಿ ಪರೀಕ್ಷೆ ಮಾಡಿಸೋಣ ಎಂದು ಜಿಲ್ಲಾಸ್ಪತ್ರೆಗೆ ಹೋದಾಗ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಈ ಸಂದರ್ಭದಲ್ಲಿ ಧೈರ್ಯ ತುಂಬಿದ ಸ್ನೇಹಿತರು, ಬೇಗ ಹುಷಾರಾಗುವಂತೆ ಹಾರೈಸಿದರು.

ಕೆಲವರು ತೀವ್ರ ಆತಂಕ ವ್ಯಕ್ತಪಡಿಸಿದರು. ಇನ್ನೂ ಕೆಲವರು ವಿಪರೀತ ಭಯಕ್ಕೆ ಒಳಗಾಗದರು. ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೋಂಕಿತರನ್ನು ವಿಚಿತ್ರವಾದ ರೀತಿ ನೋಡಲಾಗುತ್ತಿದೆ ಎಂದು ಆರೋಪಿಸುತ್ತಾರೆ ಹಿರೇಮಠ.

ಯಾವುದೋ ಭಯಾನಕ ಅಪರಾಧ ಎಸಗಿ ಬಂದವರಂತೆ ನೋಡುತ್ತಾರೆ. ಕೋವಿಡ್ ಕೇರ್ ಸೆಂಟರ್ ಸ್ವಚ್ಛತೆ, ಊಟ, ಚಿಕಿತ್ಸೆ ಸೇರಿದಂತೆ ಎಲ್ಲದರಲ್ಲಿಯೂ ಕೆಟ್ಟದ್ದಾಗಿದೆ. ವೈದ್ಯಕೀಯ ಸೇವೆ ಸಮರ್ಪಕವಾಗಿಲ್ಲ. ಬಿಸಿನೀರು ಕುಡಿಯಬೇಕು ಎನ್ನುತ್ತಾರೆ. ಆದರೆ, ಸೆಂಟರ್‌ನಲ್ಲಿ ಬಿಸಿ ನೀರು ಸಿಗುವುದಿಲ್ಲ ಎಂದು ಆರೋಪಿಸಿದರು.

ಹಿರಿಯ ಅಧಿಕಾರಿಗಳು ಶುಭಹಾರೈಸಿ, ಕೊರೊನಾ ಕುರಿತಂತೆ ಸರಿಯಾದ ಮಾಹಿತಿ ನೀಡಿದರು. ಇದರಿಂದ ಮನೋಸ್ಥೈರ್ಯ ಹೆಚ್ಚಾಯಿತು. ಅಲ್ಲದೆ ಆಸ್ಪತ್ರೆಯಿಂದ ಮನೆಗೆ ಬರಲು ಸಹಾಯವಾಯಿತು. ಕೊರೊನಾ ರೋಗಿಯನ್ನು ಮನೆಯ ಸುತ್ತಮುತ್ತಲಿನ ಜನ ದೊಡ್ಡ ಅಪರಾಧಿ ಎಂಬಂತೆ ಪರಿಗಣಿಸುತ್ತಾರೆ. ಜನರು ಮನೆ ಮುಂದೆ ಓಡಾಡಲು ಹೆದರುತ್ತಾರೆ. ಇದೆಲ್ಲಾ ಬದಲಾಗಬೇಕು ಎಂದರು.

ಆರೋಗ್ಯ ಸಮಸ್ಯೆ ಇದ್ದವರಿಗೆ ಕೊರೊನಾ ಸ್ವಲ್ಪ ತಡವಾಗಿ ಹುಷಾರಾಗಬಹುದು. ಆದರೆ, ಖಾಯಿಲೆ ಇಲ್ಲದವರು ಬೇಗನೆ ಗುಣಮುಖರಾಗುತ್ತಾರೆ. ಪಾಸಿಟಿವ್ ಬರುತ್ತಿದ್ದಂತೆ ಯಾರು ಹೆದರಬೇಡಿ. ಧೈರ್ಯದಿಂದ ಮುನ್ನಡೆಯಿರಿ, ಬೇಗ ಗುಣಮುಖರಾಗಿ ಮನೆಗೆ ಮರುಳುತ್ತೀರಿ. ಈಗ ಕೊರೊನಾದ ಪರಿಣಾಮ ಸಹ ದುರ್ಬಲವಾಗಿದೆ. ಕೊರೊನಾ ವೈರಸ್ ದುರ್ಬಲ ವೈರಸ್ಸಾಗಿದ್ದು, ಯಾರು ಹೆದರುವ ಅವಶ್ಯಕತೆಯಿಲ್ಲಾ ಎಂದು ಹಿರೇಮಠ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.