ETV Bharat / state

86ನೇ ಕನ್ನಡ ಸಾಹಿತ್ಯ ಸಮ್ಮೇಳನ.. ಅತಿಥಿಗಳಿಗೆ ಕಲ್ಯಾಣ ಮಂಟಪ, ಸಮುದಾಯ ಭವನ ಉಚಿತವಾಗಿ ನೀಡಲು ಮುಂದಾದ ಹಾವೇರಿ ಜನ

ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಬರುವಂತಹ ಜನರ ವಸತಿ ವ್ಯವಸ್ಥೆಗಾಗಿ ಸಮುದಾಯ ಭವನಗಳು ಹಾಗು ಕಲ್ಯಾಣ ಮಂಟಪಗಳು ಉಚಿತವಾಗಿ ನೀಡಲು ಮಾಲೀಕರು ಮುಂದಾಗಿದ್ದಾರೆ.

Kn_hvr_02_
ಹಾವೇರಿ ಸಾಹಿತ್ಯ ಸಮ್ಮೇಳನ ವಸತಿ ವ್ಯವಸ್ಥೆಗೆ ತಯಾರಿ
author img

By

Published : Dec 14, 2022, 9:42 AM IST

ಹಾವೇರಿ ಸಾಹಿತ್ಯ ಸಮ್ಮೇಳನ ವಸತಿ ವ್ಯವಸ್ಥೆಗೆ ತಯಾರಿ

ಹಾವೇರಿ: ಜಿಲ್ಲೆಯಲ್ಲಿ ಜನವರಿ 6, 7 ಮತ್ತು 8 ರಂದು ಪ್ರಥಮ ಬಾರಿಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನಕ್ಕೆ ಬರುವಂತಹ ಅತಿಥಿಗಳು ಮತ್ತು ಸಾಹಿತಿಗಳಿಗೆ ಉಳಿದುಕೊಳ್ಳಲು ವಸತಿಗೆ ತೊಂದರೆಯಾಗದಂತೆ ಉಚಿತವಾಗಿ ಕಲ್ಯಾಣ ಮಂಟಪ ಮತ್ತು ಸಮುದಾಯ ಭವನಗಳಲ್ಲಿ ನೀಡಲು ಮಾಲೀಕರು ಮುಂದಾಗಿದ್ದಾರೆ.

ಕಸಾಪ ರಾಜ್ಯಾಧ್ಯಕ್ಷ ಡಾ ಮಹೇಶ್ ಜೋಶಿ ಮತ್ತು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲೆಯವರಾಗಿದ್ದರಿಂದ ಸಮ್ಮೇಳನ ತೀವ್ರ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಚಿಕ್ಕ ಜಿಲ್ಲೆಯಾಗಿರುವ ಹಾವೇರಿಯಲ್ಲಿ ಸಮ್ಮೇಳನದ ಅತಿಥಿಗಳಿಗೆ ವಸತಿ ವ್ಯವಸ್ಥೆ ಒದಗಿಸುವುದು ದೊಡ್ಡಸವಾಲಿನ ಕೆಲಸವಾಗಿದೆ. ಆದರೆ ಜಿಲ್ಲಾಡಳಿತ ಈ ಆತಂಕವವನ್ನು ಹಾವೇರಿ ಜಿಲ್ಲಾ ಕಲ್ಯಾಣಮಂಟಪ ಮತ್ತು ಸಮುದಾಯ ಕೇಂದ್ರಗಳ ಮಾಲೀಕರು ದೂರ ಮಾಡಿದ್ದಾರೆ.

ಹಾವೇರಿ, ಶಿಗ್ಗಾಂವಿ, ಬ್ಯಾಡಗಿ ಮತ್ತು ರಾಣೆಬೆನ್ನೂರು ನಗರದಲ್ಲಿರುವ ಎಲ್ಲಾ ಕಲ್ಯಾಣ ಮಂಟಪ ಮತ್ತು ಸಮುದಾಯ ಭವನಗಳನ್ನು ಸಮ್ಮೇಳನಕ್ಕೆ ಬರುವ ಅತಿಥಿಗಳಿಗೆ ಉಚಿತವಾಗಿ ನೀಡಲು ಮುಂದಾಗಿದ್ದಾರೆ. ಇದರಿಂದ ಜಿಲ್ಲಾಡಳಿತಕ್ಕೆ ದೊಡ್ಡ ಆತಂಕ ಕಡಿಮೆಯಾಗಿದೆ. ಈ ನಾಲ್ಕು ತಾಲೂಕು ಕೇಂದ್ರಗಳಲ್ಲಿ ಸುಮಾರು 30ಕ್ಕೂ ಅಧಿಕ ಕಲ್ಯಾಣ ಮಂಟಪ ಮತ್ತು ಸಮುದಾಯ ಭವನಗಳಿದ್ದು, ಬಹಳಷ್ಟು ಜನರು ಇಲ್ಲಿ ಉಳಿದುಕೊಳ್ಳಲಿದ್ದಾರೆ.

ಈ ಮಧ್ಯೆ ಲಾಡ್ಜ್ ಮಾಲೀಕರು ಸಹ ಸಮ್ಮೇಳನಕ್ಕೆ ಬರುವ ಅತಿಥಿಗಳಿಗೆ ಪ್ರತಿಶತ 50 ರಷ್ಟು ರಿಯಾಯತಿಯಲ್ಲಿ ವಸತಿ ವ್ಯವಸ್ಥೆ ನೀಡಲು ಮುಂದಾಗಿದ್ದಾರೆ. ಸಮ್ಮೇಳನಕ್ಕೆ ಬರುವ ಅತಿಥಿಗಳಿಗೆ ವಸತಿ ಕಲ್ಪಿಸುವುದು ದೊಡ್ಡ ಸಮಸ್ಯೆಯಾಗಿತ್ತು. ಜಿಲ್ಲೆಯ ಲಾಡ್ಜ್​ ಮಾಲೀಕರು ಕಲ್ಯಾಣ ಮಂಟಪದ ಮಾಲೀಕರು ಮತ್ತು ಸಮುದಾಯ ಭವನದ ಮಾಲೀಕರ ನಿರ್ಧಾರದಿಂದ ಅರ್ಧಕ್ಕೆ ಅರ್ಧದಷ್ಟು ಸಮಸ್ಯೆ ನಿವಾರಣೆಯಾದಂತಾಗಿದೆ.

ಇದರ ಜೊತೆಗೆ ವಸತಿ ನಿಲಯಗಳು ವಸತಿ ಶಾಲೆಗಳನ್ನ ಈಗಾಗಲೇ ಗುರುತಿಸಲಾಗಿದ್ದು, ಸಮಸ್ಯೆ ಕಡಿಮೆಯಾಗುವ ಮುನ್ಸೂಚನೆ ಸಿಕ್ಕಂತಾಗಿದೆ. ಹಾವೇರಿ ಮಠಾಧೀಶರು ಸಹ ತಮ್ಮ ಸಮುದಾಯ ಭವನ ಮತ್ತು ಕಲ್ಯಾಣ ಮಂಟಪಗಳನ್ನ ಉಚಿತವಾಗಿ ನೀಡಲು ಮುಂದಾಗಿರುವುದು ಸಾಹಿತ್ಯ ಪ್ರೇಮಿಗಳಿಗೆ ಸಂತಸ ತಂದಿದೆ. ಸಂಘ ಸಂಸ್ಥೆಗಳು ಕನ್ನಡಪರ ಸಂಘಟನೆಗಳು ಸಮ್ಮೇಳನಕ್ಕೆ ಕೈಜೋಡಿಸಿದರೆ ಸಮ್ಮೇಳನ ಅಭೂತಪೂರ್ವಕ ನಡೆಯಲಿದೆ ಎಂಬ ವಿಶ್ವಾಸವನ್ನು ಸಾಹಿತಿಗಳು ಮಠಾಧೀಶರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಸಚಿವ ಅಮಿತ್ ಶಾ ನೇತೃತ್ವದ ಸಭೆಯನ್ನು ಸಿಎಂ ಬೊಮ್ಮಾಯಿ‌ ಬಹಿಷ್ಕರಿಸಬೇಕು: ವಾಟಾಳ್ ನಾಗರಾಜ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.