ಹಾನಗಲ್: ಪಟ್ಟಣದ ಹೊರವಲಯದಲ್ಲಿರುವ ಮಲ್ಲಿಗಾರ ಓಣಿಯಲ್ಲಿನ ಶ್ರೀ ಸಿದ್ದರಾಮೇಶ್ವರ ದೇವಸ್ಥಾನ ಮತ್ತು ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಬೆಳೆದಿದ್ದ ಮುಳ್ಳಿನ ಗಿಡಗಳು ಮತ್ತು ಕಸವನ್ನು ಇಂದು ಬೆಳ್ಳಂಬೆಳಗ್ಗೆ ತಹಶೀಲ್ದಾರ್ ಮತ್ತು ಸಿಬ್ಬಂದಿ ಶುಚಿಗೊಳಿಸಿದರು.
ಒಂದು ವಾರಗಳ ಕಾಲ ಇಲ್ಲಿನ ವಿವಿಧ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಈ ತಂಡ ಸ್ವಚ್ಛಗೊಳಿಸಿದೆ. ಪಟ್ಟಣದ ಮುಖ್ಯ ಕೆರೆಯಾದ ಆನೆ ಕೆರೆ ಮತ್ತು ಶಾಲಾ ಆವರಣ, ದೇವಸ್ಥಾನ ಸೇರಿದಂತೆ ವಿವಿಧೆಡೆ ಸ್ವಚ್ಛತಾ ಕಾರ್ಯ ಕೈಗೊಂಡು ಸಾರ್ವಜನಿಕರ ಮೆಚ್ಚುಗೆಗಳಿಸಿದರು.