ಹಾವೇರಿ: ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಆರಂಭವಾಗಿದೆ. ಮತದಾರರು ಮುಂಜಾನೆಯಿಂದಲೇ ಮತಕೇಂದ್ರಕ್ಕೆ ಆಗಮಿಸಿ ಮತದಾನ ಮಾಡುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಹಾನಗಲ್ ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿರುವ ಮತಗಟ್ಟೆ 89ರಲ್ಲಿ ಮತದಾನ ಮಾಡಿದರು. ಪತ್ನಿ ಉಷಾ ಜೊತೆ ಆಗಮಿಸಿ ಶ್ರೀನಿವಾಸ ಮಾನೆ ತಮ್ಮ ಹಕ್ಕು ಚಲಾಯಿಸಿದರು. ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ ತಮ್ಮ ಸಂಗಡಿಗರ ಜೊತೆ ಆಗಮಿಸಿ ಮತದಾನ ಮಾಡಿದರು.
ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ್, ಮತಗಟ್ಟಿಗಳಿಗೆ ತೆರಳಿ ಮತದಾನ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು. ಮತದಾರರು ಮುಂಜಾನೆ 7 ರಿಂದ ಉತ್ಸುಕರಾಗಿ ಬಮದು ಮತದಾನ ಮಾಡುತ್ತಿದ್ದಾರೆ. ವಿಶೇಷ ಚೇತನರು, ವಯೋವೃದ್ಧರು ಸೇರಿ ಮತದಾರರು ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.
ಇದನ್ನೂ ಓದಿ: ಉಪಚುನಾವಣೆ: ಸಿಂದಗಿ, ಹಾನಗಲ್ನಲ್ಲಿ ಮತದಾನ ಆರಂಭ
ಕ್ಷೇತ್ರದ ಮೂರು ಮತಕೇಂದ್ರಗಳಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ಮತದಾನ ವಿಳಂಬವಾಗಿ ಆರಂಭವಾಯಿತು. ಕ್ಷೇತ್ರದ 263 ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಮುಂಜಾನೆ 9 ಗಂಟೆಗೆ ಶೇ. 8.77 ರಷ್ಟು ಮತದಾನವಾಗಿದೆ.