ಹಾವೇರಿ : ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದು ಅಂತ್ಯಗೊಂಡಿದೆ.
![nomination filed date closed](https://etvbharatimages.akamaized.net/etvbharat/prod-images/kn-hvr-06-overall-nomination-7202143_08102021204449_0810f_1633706089_339.jpg)
ಅ.1ರಿಂದ ಆರಂಭವಾದ ನಾಮಪತ್ರ ಸಲ್ಲಿಕೆ ಶುಕ್ರವಾರದವರೆಗೆ ನಡೆಯಿತು. ಒಟ್ಟು 29 ಅಭ್ಯರ್ಥಿಗಳಿಂದ 45 ನಾಮಪತ್ರ ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಇಂದು ಒಂದೇ ದಿನ 20 ಅಭ್ಯರ್ಥಿಗಳು 30 ನಾಮಪತ್ರ ಸಲ್ಲಿಸಿದ್ದಾರೆ.
![nomination filed date closed](https://etvbharatimages.akamaized.net/etvbharat/prod-images/kn-hvr-06-overall-nomination-7202143_08102021204449_0810f_1633706089_644.jpg)
ಅ.11ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಅ.13 ಕೊನೆಯ ದಿನವಾಗಿದೆ. ಕಾಂಗ್ರೆಸ್ಸಿನಿಂದ ಶ್ರೀನಿವಾಸ ಮಾನೆ, ಬಿಜೆಪಿಯ ಶಿವರಾಜ್ ಸಜ್ಜನರ್ ಮತ್ತು ಜೆಡಿಎಸ್‌ನ ನಿಯಾಜ್ ಶೇಖ್ ನಾಮಪತ್ರ ಸಲ್ಲಿಸಿದ್ದಾರೆ. ಅ.30ರಂದು ಮತದಾನ ನಡೆಯಲಿದೆ. ನವೆಂಬರ್ 2ರಂದು ಮತ ಎಣಿಕೆ ನಡೆಯಲಿದೆ.
ಜೂನ್ 8 ರಂದು ನಿಧನರಾಗಿದ್ದ ಹಾನಗಲ್ ಕ್ಷೇತ್ರದ ಶಾಸಕ ಸಿ ಎಂ ಉದಾಸಿ ಸ್ಥಾನಕ್ಕೆ ಹಾನಗಲ್ ವಿಧಾನಸಭೆಯಲ್ಲಿ ಉಪಚುನಾವಣೆ ನಡೆಯುತ್ತಿದೆ.
ಇದನ್ನೂ ಓದಿ: ನನ್ನ ನೇತೃತ್ವದಲ್ಲೇ 2023 ರ ಚುನಾವಣೆ: ಸಾಮೂಹಿಕ ನಾಯಕತ್ವದ ಜಪ ಮಾಡುತ್ತಿದ್ದ ನಾಯಕರಿಗೆ ಬೊಮ್ಮಾಯಿ ಶಾಕ್