ETV Bharat / state

ಪುನೀತ್​ ರಾಜ್​ಕುಮಾರ್​ ನಿಧನಕ್ಕೆ 3 ಸಾವಿರಮಠದ ಶ್ರೀಗಳ ಸಂತಾಪ - ಅಪ್ಪು ನಿಧನ

ಸ್ಯಾಂಡಲ್​ವುಡ್​​ ನಟ ಪುನೀತ್​ ರಾಜ್​ಕುಮಾರ್​ ನಿಧನಕ್ಕೆ ಮೂರುಸಾವಿರಮಠದ ಗುರುಸಿದ್ದರಾಜಯೋಗೇಂದ್ರ ಶ್ರೀಗಳು ಸಂತಾಪ ಸೂಚಿಸಿದ್ದಾರೆ.

gurusiddaraja yogendra sri condolence to puneeth rajkumar
ಪುನೀತ್​ ರಾಜ್​ಕುಮಾರ್​ ನಿಧನಕ್ಕೆ ಮೂರುಸಾವಿರಮಠದ ಶ್ರೀ ಸಂತಾಪ
author img

By

Published : Oct 30, 2021, 2:09 PM IST

ಹಾವೇರಿ:ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನಕ್ಕೆ ಹುಬ್ಬಳ್ಳಿ ಮೂರುಸಾವಿರಮಠದ ಗುರು ಸಿದ್ದರಾಜಯೋಗೇಂದ್ರ ಶ್ರೀಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಾವೇರಿ ಜಿಲ್ಲೆ ಹಾನಗಲ್ ಕುಮಾರೇಶ್ವರ ಮಠದಲ್ಲಿ ಮಾತನಾಡಿದ ಅವರು, ಪುನೀತ್ ಚಿಕ್ಕವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದ ನಟ. ಅವರ ಸಾವು ಕನ್ನಡ ಚಿತ್ರರಂಗವಷ್ಟೇ ಅಲ್ಲ ದಕ್ಷಿಣ ಭಾರತದ ರಾಜ್ಯಗಳಿಗೆ ತುಂಬಲಾರದ ನಷ್ಟ ಎಂದು ಸಂತಾಪ ಸೂಚಿಸಿದರು.

ಪುನೀತ್​ ರಾಜ್​ಕುಮಾರ್​ ನಿಧನಕ್ಕೆ ಮೂರುಸಾವಿರಮಠದ ಶ್ರೀ ಸಂತಾಪ

ಪುನೀತ್​​ ರಾಜಕುಮಾರ್ ಕನ್ನಡನಾಡು ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು. ತಮ್ಮ ಅಭಿನಯದ ಮೂಲಕ ನಾಡಿನ ಲಕ್ಷಾಂತರ ಜನರ ಮನಗೆದ್ದ ವ್ಯಕ್ತಿ ಪುನೀತರಾಜಕುಮಾರ್. ಪುನೀತ್​​ ರಾಜಕುಮಾರ್ ಇವತ್ತು ಇಲ್ಲ ಎಂಬುದು ಯಾರೂ ಊಹಿಸಿಕೊಳ್ಳಲಾಗುತ್ತಿಲ್ಲ ಎಂದರು.

ಅಭಿಜಾತ ಕಲಾವಿದನನ್ನ ಕಳೆದುಕೊಂಡ ಕನ್ನಡ ನಾಡು ಬಡವಾಗಿದೆ. ಅವರ ಕುಟುಂಬಕ್ಕೆ ಪುನೀತ್ ರಾಜ್ ಅಗಲುವಿಕೆಯ ದುಃಖವನ್ನು ತಡೆದುಕೊಳ್ಳುವ ಶಕ್ತಿ ಪರಮಾತ್ಮ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಶ್ರೀಗಳು ತಿಳಿಸಿದರು.

ಇದನ್ನೂ ಓದಿ:ಪುನೀತ್‌ ಪಾರ್ಥಿವ ಶರೀರ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಜೂ.ಎನ್‌ಟಿಆರ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.